ಓದಿನಲ್ಲಿ ಸಾಧಿಸಿ ಬದುಕು ಕಟ್ಟಿಕೊಳ್ಳಬೇಕೆಂಬ ಕನಸಿನೊಂದಿಗೆ ಕಾಲೇಜಿಗೆ ಬಂದವಳು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುಧಾ. ಇದೀಗ ಅದೇ ಕಾಲೇಜಿನಲ್ಲಿ ಬದುಕಿಗೆ ಗುಡ್'​ಬೈ ಹೇಳಿದ್ದಾಳೆ. ತಾನು ಓದುವ ಕ್ಲಾಸ್​'ರೂಮಲ್ಲೇ ನೇಣಿಗೆ ಶರಣಾಗಿದ್ದಾಳೆ. ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯ ರಮಾಬಾಯಿ ಜಹಾಗಿರದಾರ ಕಾಲೇಜಿನಲ್ಲಿ ಓದುತ್ತಿದ್ದ ಸುಧಾ ನಿನ್ನೆ ಮಧ್ಯಾಹ್ನದವರೆಗೂ ಕನಕ ಜಂಯಂತಿಯಲ್ಲಿ ಪಾಲ್ಗೊಂಡಿದ್ದಾಳೆ. ಆದರೆ, ಸಂಜೆ ಹೊತ್ತಿಗೆ ತರಗತಿ ಕೋಣೆಯಲ್ಲಿ ಫ್ಯಾನ್​'ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ  ಶವ ಪತ್ತೆಯಾಗಿದೆ.

ಗುಲ್ಬರ್ಗಾ(ನ.18): ದ್ವಿತಿಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು, ತಾನು ಓದುತ್ತಿರುವ ಕ್ಲಾಸ್ ರೂಮ್'ನಲ್ಲಿಯೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಾವಿಗೀಡಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇದು ಆತ್ಮಹತ್ಯೆಯಂತೂ ಅಲ್ಲವೇ ಅಲ್ಲ. ಬೇರೆನೋ ನಡೆದಿದೆ ಎನ್ನುವ ಆರೋಪ ಈ ವಿದ್ಯಾರ್ಥಿನಿಯ ಪಾಲಕರಿಂದ ಕೇಳಿ ಬಂದಿದೆ. ಹಾಗಾದರೆ ನಡೆದಿದ್ದೇನು? ಇಲ್ಲಿದೆ ವಿವರ

ಓದಿನಲ್ಲಿ ಸಾಧಿಸಿ ಬದುಕು ಕಟ್ಟಿಕೊಳ್ಳಬೇಕೆಂಬ ಕನಸಿನೊಂದಿಗೆ ಕಾಲೇಜಿಗೆ ಬಂದವಳು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುಧಾ. ಇದೀಗ ಅದೇ ಕಾಲೇಜಿನಲ್ಲಿ ಬದುಕಿಗೆ ಗುಡ್'​ಬೈ ಹೇಳಿದ್ದಾಳೆ. ತಾನು ಓದುವ ಕ್ಲಾಸ್​'ರೂಮಲ್ಲೇ ನೇಣಿಗೆ ಶರಣಾಗಿದ್ದಾಳೆ.

ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯ ರಮಾಬಾಯಿ ಜಹಾಗಿರದಾರ ಕಾಲೇಜಿನಲ್ಲಿ ಓದುತ್ತಿದ್ದ ಸುಧಾ ನಿನ್ನೆ ಮಧ್ಯಾಹ್ನದವರೆಗೂ ಕನಕ ಜಂಯಂತಿಯಲ್ಲಿ ಪಾಲ್ಗೊಂಡಿದ್ದಾಳೆ. ಆದರೆ, ಸಂಜೆ ಹೊತ್ತಿಗೆ ತರಗತಿ ಕೋಣೆಯಲ್ಲಿ ಫ್ಯಾನ್​'ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡರೂ ಸುಧಾ ಕುಟುಂಬದವರು ಇದನ್ನು ಒಪ್ಪಲು ತಯಾರಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಆಕೆಗೇನೂ ಇರಲಿಲ್ಲ. ಕಾಲೇಜಿನಲ್ಲಿ ಮತ್ತಿನ್ನೇನೋ ನಡೆದಿದೆ. ನಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಿ ಎನ್ನುವುದು ಸುಧಾ ಹೆತ್ತವರ ಅಳಲು

ನಿನ್ನೆ ಕನಕ ಜಯಂತಿ, ರಜೆ ದಿನವಾದರೂ ಸುಧಾ ಕ್ಲಾಸ್ ರೂಮಿಗೆ ಹೋಗಿದ್ಯಾಕೆ..? ಕ್ಲಾಸ್​ರೂಮಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವಾಗ ಯಾರ ಕಣ್ಣಿಗೂ ಬೀಳಲಿಲ್ವಾ? ಎನ್ನುವ ಪ್ರಶ್ನೆಗಳು ಎದುರಾಗುತ್ತವೆ .ಜೊತೆಗೆ ಈ ಕಾಲೇಜು ಕಟ್ಟಡದ ಮೇಲೆಯೇ ವಿದ್ಯಾರ್ಥಿನಿಯರ ಹಾಸ್ಟೆಲ್ ಇದ್ದರೂ ಅಲ್ಲಿ ಮಹಿಳಾ ವಾರ್ಡನ್​'ಗಳಿಲ್ಲ. ಹೀಗಾಗಿಯೇ ಪೋಷಕರಿಗೆ ಇದು ಆತ್ಮಹತ್ಯೆಯಲ್ಲ ಎನ್ನುವ ಅನುಮಾನ. ಹೀಗಾಗಿ ಇದರ ಸತ್ಯಾಸತ್ಯತೆಯನ್ನು ಅಶೋಕ ನಗರ ಪೊಲೀಸರು ಪತ್ತೆ ಹಚ್ಚಬೇಕಿದೆ.