ಬೆಂಗಳೂರು, [ಡಿ.16]: ಬ್ಯಾಂಕಿಗೆ ಹೋಗುವ ಗ್ರಾಹಕರನ್ನು ಟಾರ್ಗೆಟ್ ಮಾಡಿ ಹಣ ದೋಚುತ್ತಿದ್ದ ಕುಖ್ಯಾತ ಓಜಿಕುಪ್ಪಂ  ಗ್ಯಾಂಗ್ ಸದಸ್ಯರನ್ನು ಇಂದು [ಭಾನುವಾರ] ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಪ್ರವೀಣ್, ರಮೇಶ್, ರಾಜು, ಕಾರ್ತಿಕ್, ಅಂಕಯ್ಯಾ ಅಲಿಯಾಸ್ ಬಾಬು ಬಂಧಿತ ಆರೋಪಿಗಳು. ನಗರ ಸೇರಿದಂತೆ ಹಲವು ಕಡೆ ಬ್ಯಾಂಕ್ ತೆರಳುವ ಗ್ರಾಹಕರನ್ನ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್ ಕ್ಷಣಾರ್ಧದಲ್ಲಿ ಹಣ ದೋಚಿ ಪರಾರಿಯಾಗುತ್ತಿದ್ದರು.

ಬ್ಯಾಂಕ್ ಗ್ರಾಹಕರನ್ನೇ ಗುರಿ ಮಾಡಿ ಕಳ್ಳತನ ಮಾಡುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ಡಿಸಿಪಿ ಅಣ್ಣಾಮಲೈ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

ಅದರಂತೆ ಸುಬ್ರಮಣ್ಯಪುರ ಎಸಿಪಿ ಮಹದೇವ್ ಮುಂದಾಳತ್ವದ ತಂಡ ಆರೋಪಿಗಳ ಚಲನ ವಲನಗಳ ಮೇಲೆ ನಿಗಾವಹಿಸಿ ಇಂದು ಖತರ್ನಾಕ್ ಗ್ಯಾಂಗಿನ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.