ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಸ್ವತಃ ಜಿಲ್ಲಾಧಿಕಾರಿ ವಿಜಯ ರೆಡ್ಡಿ ಜ್ಯೋತ್ಸ್ನಾ ತಮ್ಮ ಕಾರಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ಕಲ್ಪಿಸಿ, ಎಲ್ಲರಿಗೂ ಮಾದರಿ ಎನಿಸಿದ್ದಾರೆ. ನಗರದ ಹಳೇ ವೈಶಾಲಿ ಆಸ್ಪತ್ರೆ ಬಳಿ ಶುಕ್ರವಾರ ಸಂಜೆ ಆಟೋವೊಂದು ಪಲ್ಟಿಯಾಗಿ ನಗರದ ಆಂಜನೇಯಸ್ವಾಮಿ ಬಡಾವಣೆಯ ವಿದ್ಯಾರ್ಥಿ ಅಸ್ಲಂ ಪಾಷಾ (11) ಎಂಬುವನಿಗೆ ತೀವ್ರ ಗಾಯಗಳಾಗಿದ್ದವು.

ಚಿತ್ರದುರ್ಗ: ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಸ್ವತಃ ಜಿಲ್ಲಾಧಿಕಾರಿ ವಿಜಯ ರೆಡ್ಡಿ ಜ್ಯೋತ್ಸ್ನಾ ತಮ್ಮ ಕಾರಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ಕಲ್ಪಿಸಿ, ಎಲ್ಲರಿಗೂ ಮಾದರಿ ಎನಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಹಳೇ ವೈಶಾಲಿ ಆಸ್ಪತ್ರೆ ಬಳಿ ಶುಕ್ರವಾರ ಸಂಜೆ ಆಟೋವೊಂದು ಪಲ್ಟಿಯಾಗಿ ನಗರದ ಆಂಜನೇಯಸ್ವಾಮಿ ಬಡಾವಣೆಯ ವಿದ್ಯಾರ್ಥಿ ಅಸ್ಲಂ ಪಾಷಾ (11) ಎಂಬುವನಿಗೆ ತೀವ್ರ ಗಾಯಗಳಾಗಿದ್ದವು.

ಅದೇ ಮಾರ್ಗದಲ್ಲಿ ಬರುತ್ತಿದ್ದ ಜಿಲ್ಲಾಧಿಕಾರಿ ವಿಜಯರೆಡ್ಡಿ ಅವರು ತಕ್ಷಣವೇ ಕಾರು ನಿಲ್ಲಿಸಿ ಗಾಯಾಳು ಬಾಲಕನನ್ನು ಕಾರಿನಲ್ಲಿ ಕರೆ ತಂದು ಆಸ್ಪತ್ರೆಗೆ ಸೇರಿಸಿದ್ದಾರೆ.

ಜಿಲ್ಲಾಧಿಕಾರಿ ಆಗಮಿಸಿದ್ದನ್ನು ಕಂಡು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್ ಸೇರಿದಂತೆ ತಜ್ಞ ವೈದ್ಯರು ತಕ್ಷಣವೇ ವಾರ್ಡ್‌ಗೆ ಆಗಮಿಸಿ ಗಾಯಾಳು ಅಸ್ಲಂ ಪಾಷಾನಿಗೆ ಚಿಕಿತ್ಸೆ ನೀಡಿದ್ದಾರೆ.

ಪೋಷಕರು ಬರು ವರೆಗೂ ಬಾಲಕನ ಬಳಿಯೇ ಇದ್ದ ಜಿಲ್ಲಾಧಿಕಾರಿ, ಪೋಷಕರ ಆಗಮನದ ಬಳಿಕ ಅಲ್ಲಿಂದ ಕಚೇರಿಗೆ ತೆರಳಿದರು.