ಹಗಲು ನಿದ್ರಿಸುವವರಿಗೆ ಸೋಮಾರಿತನ ಕಾಡುವುದನ್ನು ಕೇಳಿದ್ದೀರಿ. ಆದರೆ, ಟೋಕಿಯೊ ಯುನಿವರ್ಸಿಟಿ ಇಂಥವರಿಗೆ ಡಯಾಬಿಟೀಸ್ ಕೂಡ ಕಟ್ಟಿಟ್ಟಬುತ್ತಿ ಎಂದು ಕಟುಸತ್ಯವೆಂಬಂತೆ ಹೇಳುತ್ತಿದೆ. ಒಟ್ಟಾರೆ 3 ಲಕ್ಷ ಮಂದಿಯ ನಡುವೆ 21 ಸಂಶೋಧನೆಗಳನ್ನು ನಡೆಸಿ, ವಿವಿ ಈ ಸತ್ಯ ಕಂಡುಕೊಂಡಿದೆ. ಹಗಲು ಹೊತ್ತು 60 ನಿಮಿಷಕ್ಕಿಂತ ಜಾಸ್ತಿ ಮಲಗುವ ಅಭ್ಯಾಸ ಇದ್ದವರಲ್ಲಿಯೇ ‘ಡಯಾಬಿಟೀಸ್ 2’ ಹೆಚ್ಚು ಕಾಣಿಸಿಕೊಂಡಿದೆ. ಈ ಪ್ರಮಾಣ ಶೇ.೪೩ರಷ್ಟಿದೆ ಎನ್ನುತ್ತದೆ ವಿವಿ ಸಂಶೋಧನೆ. ಆದರೆ, 40 ನಿಮಿಷಕ್ಕಿಂತ ಕಡಿಮೆ ಮಲಗಬಹುದು ಎಂದು ಇಲ್ಲಿನ ಸಂಶೋಧನಾ ತಜ್ಞರೇ ಹೇಳುತ್ತಾರೆ. ಇಂಥವರಲ್ಲಿ ಮಧುಮೇಹ ಲಕ್ಷಣಗಳು ಕಾಣಿಸಿಕೊಂಡಿಲ್ವಂತೆ. 40- 60 ನಿಮಿಷ ನಿದ್ರಿಸುವವರಲ್ಲಿ ಶೇ.27ರಷ್ಟು ಮಧುಮೇಹದ ರಿಸ್ಕ್ ಕಾಣಿಸಿಕೊಂಡಿದೆಯಂತೆ. ಹಗಲು ಹೊತ್ತು ಜಾಸ್ತಿ ಮಲಗೋದನ್ನು ಇನ್ನಾದರೂ ಬಿಟ್ಟುಬಿಡುವುದು ಉತ್ತಮ.