ಪ್ರಸ್ತುತ ಎನ್'ಡಿಎ ಮೈತ್ರಿಕೂಟದಲ್ಲಿ ಭಾರಿ ಕೈಗಾರಿಕಾ ಸಚಿವ ಅನಂತ್ ಗೀತೆ ಮಾತ್ರ ಏಕೈಕ ಶಿವಸೇನಾ ಸದಸ್ಯರಾಗಿದ್ದಾರೆ. 

ಮುಂಬೈ(ಸೆ.04): ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಂತರ ಮುನಿಸಿಕೊಂಡಿರುವ ಎನ್'ಡಿಎ ಮಿತ್ರ ಪಕ್ಷ ಶಿವಸೇನೆ ಮಿತ್ರಕೂಟದಿಂದ ಹೊರಬರುವ ಸೂಚನೆ ನೀಡುತ್ತಿದೆ.

ಈ ಸಂಬಂಧ ಪಕ್ಷದ ಅಧ್ಯಕ್ಷ ಉದ್ಭವ್ ಠಾಕ್ರೆ ಇಂದು ಪಕ್ಷದ ನಾಯಕರ ತುರ್ತು ಸಭೆ ಕರೆದಿದ್ದಾರೆ. ಇದರ ಬೆನ್ನಲ್ಲೆ ಶಿವಸೇನೆ ಸಂಸದರಾದ ಸಂಜಯ್ ಸಂಜಯ್ ರಾವುತ್ ಎನ್'ಡಿಎ ಬಹುತೇಕ ಮೃತಪಟ್ಟಂತೆ ಎಂದು ತಿಳಿಸಿದ್ದಾರೆ. ನಿನ್ನೆ ನಡೆದ ಕೇಂದ್ರ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಶಿವಸೇನೆಯ ಯಾವೊಬ್ಬ ನಾಯಕರು ಪಾಲ್ಗೊಂಡಿರಲಿಲ್ಲ. ಹೊಸಬರ ಮಂತ್ರಿಮಂಡಳದಲ್ಲಿ ಶಿವಸೇನೆಯ ಸಂಸದರನ್ನು ಪರಿಗಣಿಸದ ಕಾರಣ ಆ ಪಕ್ಷದ ಮುನಿಸಿಗೆ ಕಾರಣವಾಗಿದೆ.

ಪ್ರಸ್ತುತ ಎನ್'ಡಿಎ ಮೈತ್ರಿಕೂಟದಲ್ಲಿ ಭಾರಿ ಕೈಗಾರಿಕಾ ಸಚಿವ ಅನಂತ್ ಗೀತೆ ಮಾತ್ರ ಏಕೈಕ ಶಿವಸೇನಾ ಸದಸ್ಯರಾಗಿದ್ದಾರೆ. ಈ ಮಧ್ಯೆ ಸಂಪುಟ ವಿಸ್ತರಣೆಯಲ್ಲಿ ಇನ್ನೊಂದು ಮಿತ್ರ ಪಕ್ಷ ಜೆಡಿಯು ಕೂಡ ಮುನಿಸಿಕೊಂಡಂತಿದೆ. ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಜೆಡಿಯು ನಾಯಕರು ಕಾಣಿಸಲಿಲ್ಲ. ಆದರೆ ತಮಗೆ ಯಾವುದೇ ಬೇಜಾರಿಲ್ಲ ಎಂದು ಜೆಡಿಯು ವಕ್ತಾರ ಕೆ.ಸಿ. ತ್ಯಾಗಿ ತಿಳಿಸಿದ್ದಾರೆ.