‘ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ. ಪಶ್ಚಿಮ ಹಾಗೂ ಪೂರ್ವ ಆಫ್ರಿಕಾ ದೇಶಗಳಲ್ಲಿ ಹೂಡಿಕೆ ಮಾಡಿದ್ದಾನೆ. ಮೋದಿ ಪ್ರಧಾನಿಯಾದ ಬಳಿಕ ನಾಲ್ಕು ಬಾರಿ ತನ್ನ ಜಾಗ ಬದಲಾವಣೆ ಮಾಡಿದ್ದಾನೆ. ಆತನಿಗೆ ಪಾಕಿಸ್ತಾನದಲ್ಲಿ ಅತ್ಯಂತ ಬಿಗಿಭ‘ದ್ರತೆ ಇದೆ.

ಮುಂಬೈ(ಸೆ.22): ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಜೀವ ಭಯ ಮತ್ತಷ್ಟು ಹೆಚ್ಚಾದಂತಾಗಿದೆ.

ಏಕೆಂದರೆ, ಪಾಕಿಸ್ತಾನದಲ್ಲಿ ನೆಲೆಸಿರುವ ‘ದೇಶದ ಮೋಸ್ಟ್ ವಾಂಟೆಡ್ ‘ಯೋತ್ಪಾದಕ’ ದಾವೂದ್, ದೇಶದಲ್ಲಿ ಮೋದಿ ಅವರು ಗದ್ದುಗೆಗೇರಿದ ಬಳಿಕ ನಾಲ್ಕು ಬಾರಿ ತನ್ನ ವಿಳಾಸ ಬದಲಾವಣೆ ಮಾಡಿದ್ದಾನೆ ಎಂದು ಆತನ ಸೋದರ ಇಕ್ಬಾಲ್ ಕಸ್ಕರ್ ಪೊಲೀಸರಿಗೆ ತಿಳಿಸಿದ್ದಾನೆ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಕ್ಬಾಲ್ ಕಸ್ಕರ್‌ನನ್ನು ಬಂಧಿಸಿರುವ ಪೊಲೀಸರು, 8 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿ ದ್ದಾರೆ. ಸುಲಿಗೆ ಪ್ರಕರಣಕ್ಕೂ ದಾವೂದ್‌ಗೂ ನಂಟಿದೆಯೇ ಎಂಬುದನ್ನು ಪತ್ತೆ ಮಾಡಲು ಕಸ್ಕರ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

‘ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ. ಪಶ್ಚಿಮ ಹಾಗೂ ಪೂರ್ವ ಆಫ್ರಿಕಾ ದೇಶಗಳಲ್ಲಿ ಹೂಡಿಕೆ ಮಾಡಿದ್ದಾನೆ. ಮೋದಿ ಪ್ರಧಾನಿಯಾದ ಬಳಿಕ ನಾಲ್ಕು ಬಾರಿ ತನ್ನ ಜಾಗ ಬದಲಾವಣೆ ಮಾಡಿದ್ದಾನೆ. ಆತನಿಗೆ ಪಾಕಿಸ್ತಾನದಲ್ಲಿ ಅತ್ಯಂತ ಬಿಗಿಭ‘ದ್ರತೆ ಇದೆ. ಕುಟುಂಬ ಸದಸ್ಯರ ಜತೆ ಆತ ಫೋನಿನಲ್ಲಿ ಮಾತನಾಡುವುದಿಲ್ಲ. ಲ್ಯಾಟಿನ್ ಅಮೆರಿಕ ದೇಶದ ಮಾದಕ ವಸ್ತು ದಂಧೆಕೋರರ ಜತೆ ನಂಟು ಹೊಂದಿದ್ದಾನೆ’ ಎಂದು ಕಸ್ಕರ್ ಬಾಯಿಬಿಟ್ಟಿದ್ದಾನೆ ಎಂದು ಮಾ‘ಧ್ಯಮಗಳು ವರದಿ ಮಾಡಿವೆ. 2003ರಲ್ಲಿ ಸಂಯುಕ್ತ ಅರಬ್ ಸಂಸ್ಥಾನದಿಂದ ಗಡೀಪಾರಾಗಿ ಭಾರತಕ್ಕೆ ಬಂದಿರುವ ಕಸ್ಕರ್, ಮುಂಬೈನಲ್ಲಿ ತನ್ನ ಸೋದರನಿಗೆ ಸೇರಿದ ರಿಯಲ್ ಎಸ್ಟೇಟ್ ವ್ಯವಹಾರ ನೋಡಿಕೊಳ್ಳುತ್ತಾನೆ ಎನ್ನಲಾಗಿದೆ.