ಬ್ರಿಟನ್’ನಲ್ಲಿ ಪಾತಕಿ ದಾವೂದ್’ಗೆ ಕೋಟಿ ಕೋಟಿ ಆಸ್ತಿ

First Published 4, Feb 2018, 10:13 AM IST
Dawood Ibrahims properties in UK
Highlights

ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ, ಬ್ರಿಟನ್‌ನ ಎಲ್ಲಡೆ ಸರಣಿ ಆಸ್ತಿ ಹೊಂದಿದ್ದಾನೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ದಾವೂದ್ ಬ್ರಿಟನ್‌ನ ಮಿಡ್‌ಲ್ಯಾಂಡ್ಸ್ ಮತ್ತು ಆಗ್ನೇಯ ಭಾಗದಲ್ಲಿ ಅಪಾರ ಆಸ್ತಿ ಹೊಂದಿದ್ದಾನೆ.  

ಲಂಡನ್: ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ, ಬ್ರಿಟನ್‌ನ ಎಲ್ಲಡೆ ಸರಣಿ ಆಸ್ತಿ ಹೊಂದಿದ್ದಾನೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ದಾವೂದ್ ಬ್ರಿಟನ್‌ನ ಮಿಡ್‌ಲ್ಯಾಂಡ್ಸ್ ಮತ್ತು ಆಗ್ನೇಯ ಭಾಗದಲ್ಲಿ ಅಪಾರ ಆಸ್ತಿ ಹೊಂದಿದ್ದಾನೆ.  ಅಲ್ಲದೇ ಭಾರತ, ಯುನೈಟೆಡ್ ಅರಬ್ ಎಮಿರೇಟ್ಸ್, ಸ್ಪೇನ್, ಮೊರಾಕ್ಕೋ, ಟರ್ಕಿ, ಸೈಪ್ರಸ್ ಮತ್ತು ಆಸ್ಟ್ರೇಲಿಯಾಗಳಲ್ಲೂ ದಾವೂದ್ ಆಸ್ತಿ ಮಾಡಿದ್ದಾನೆ ಎಂದು ‘ದ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ. 

ಬ್ರಿಟನ್‌ನ ಗೃಹ ಮತ್ತು ಭೂ ನೋಂದಣಿ ಕಂಪನಿಗಳ ದಾಖಲೆಗಳು ಮತ್ತು ಪನಾಮಾ ಪೇಪರ್ಸ್‌ನ ದಾಖಲೆಗಳಿಗೆ ಸರಿ ಹೊಂದುವ ಕಡತಗಳನ್ನು ಭಾರತದ ಅಧಿಕಾರಿಗಳು ಸಿದ್ಧಪಡಿಸಿದ್ದು, ಪತ್ರಿಕೆಯ ಮಾಹಿತಿಗಳು ಈ ದಾಖಲೆಗಳಿಗೆ ಪೂರಕವಾಗಿವೆ. ದಾವೂದ್ ಬಂಟ ಮಹಮ್ಮದ್ ಇಕ್ಬಾಲ್, ದಾವೂದ್ ಹೆಸರಿನಲ್ಲಿ ಬ್ರಿಟನಲ್ಲಿ ಹೊಟೆಲ್, ಮಹಲು, ಟಾವರ್ ಬ್ಲಾಕ್ಸ್, ಮನೆಗಳನ್ನು ಹೊಂದಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

loader