ಭಾರತಕ್ಕೆ ಶರಣಾಗಲು ಸಿದ್ಧವೆಂದ ಭೂಗತ ಪಾತಕಿ: ಮೋದಿಗೆ ಹೆದರಿದನಾ ದಾವೂದ್ ಇಬ್ರಾಹಿಂ ?

First Published 6, Mar 2018, 5:18 PM IST
Dawood Ibrahim wants to surrender
Highlights

ದೇಶದಲ್ಲಿ ಹಲವು ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿರುವ ದಾವೂದ್  ಇಬ್ರಾಹಿಂ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ನಂತರ ದೇಶ ಬಿಟ್ಟು ಪರಾರಿಯಾಗಿದ್ದಾನೆ. 

ಮುಂಬೈ(ಮಾ.06): ಕುಖ್ಯಾತ ಪಾತಕಿ 1993 ಮುಂಬೈ ದಾಳಿ ಪ್ರಕರಣದ ಪ್ರಮುಖ ರೂವಾರಿ ದಾವೂದ್ ಇಬ್ರಾಹಿಂ ಭಾರತಕ್ಕೆ ಶರಣಾಗಲು ಗ್ರೀನ್ ಸಿಗ್ನಲ್ ನೀಡಿದ್ದಾನೆ.

ದೇಶದಲ್ಲಿ ಹಲವು ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿರುವ ದಾವೂದ್  ಇಬ್ರಾಹಿಂ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ನಂತರ ದೇಶ ಬಿಟ್ಟು ಪರಾರಿಯಾಗಿದ್ದಾನೆ.  ದವೂದ್ ಇಬ್ರಾಹಿಂ ಸೋದರ ಇಕ್ಬಾಲ್ ಕಸ್ಕರ್ ಪರ ವಕೀಲ ಈ ಹೇಳಿಕೆ ನೀಡಿದ್ದಾರೆ.

ಸದ್ಯ ಪಾಕ್'ನ ಕರಾಚಿಯಲ್ಲಿ ಪಾತಕಿ ತಲೆಮರೆಸಿಕೊಂಡಿದ್ದು ಶರಣಾಗಲು ಹಲವು ಷರತ್ತು ವಿಧಿಸಿದ್ದು ಅದರಲ್ಲಿ ಭಾರತದ ಖ್ಯಾತ ವಕೀಲರಾದ ರಾಮ್ ಜೇಟ್ಮಲಾನಿ ಈತನ ಪರ ವಕಾಲತ್ತು ವಹಿಸಬೇಕೆನ್ನುವುದು ಪ್ರಮುಖ ಷರತ್ತಾಗಿದೆ. ಇತ್ತೀಚಿಗೆ ಕೆಲ ತಿಂಗಳ ಹಿಂದೆ ಇನ್ನೊಬ್ಬ ಕುಖ್ಯಾತ ಪಾತಕಿ ಚೋಟಾ ರಾಜನ್ ಭಾರತಕ್ಕೆ ಶರಣಾಗಿದ್ದ.

ಈತ ಭಾರತಕ್ಕೆ ಶರಣಾಗಲು ಪ್ರಧಾನಿ ನರೇಂದ್ರ ಮೋದಿಯ ಪ್ರಮುಖ ಕಾರಣವಂತೆ. ಸರ್ಜಿಕಲ್ ಸ್ಟ್ರೈಕ್ ಮೂಲಕ ತನ್ನ ಹತ್ಯೆಯಾಗಬಹುದೆಂಬ ಭಯ ಆತನಲ್ಲಿ ಕಾಡಿದೆ. ಕೆಲ ತಿಂಗಳ ಹಿಂದೆ ದಾವೂದ್ ಬಲಗೈ ಬಂಟ ಚೋಟಾ ಶಕೀಲ್ ಹತ್ಯೆಯಾಗಿರುವ ಸುದ್ದಿ ಹರಡಿದೆ.

loader