ಭಾರತಕ್ಕೆ ಬೇಕಾಗಿರುವ ದಿ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಮೇಲೆ ಹಣಕಾಸು ನಿರ್ಬಂಧ ಮುಂದುವರಿಸಿರುವ ಬ್ರಿಟನ್ ಸರ್ಕಾರ, ಪಾಕಿಸ್ತಾನದಲ್ಲಿ 21 ನಕಲಿ ಹೆಸರುಗಳನ್ನು ಮತ್ತು ಮೂರು ವಿಳಾಸಗಳನ್ನು ಹೊಂದಿರುವ ಬಗ್ಗೆ ಪತ್ತೆ ಹಚ್ಚಿದೆ.

ಲಂಡನ್(ಆ.23): ಭಾರತಕ್ಕೆ ಬೇಕಾಗಿರುವ ದಿ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಮೇಲೆ ಹಣಕಾಸು ನಿರ್ಬಂಧ ಮುಂದುವರಿಸಿರುವ ಬ್ರಿಟನ್ ಸರ್ಕಾರ, ಪಾಕಿಸ್ತಾನದಲ್ಲಿ 21 ನಕಲಿ ಹೆಸರುಗಳನ್ನು ಮತ್ತು ಮೂರು ವಿಳಾಸಗಳನ್ನು ಹೊಂದಿರುವ ಬಗ್ಗೆ ಪತ್ತೆ ಹಚ್ಚಿದೆ.

ಬ್ರಿಟನ್ ಹಣಕಾಸು ಇಲಾಖೆ ಹೊಸದಾಗಿ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಪಾಕ್‌ನಲ್ಲಿ ಹಲವು ಅವ್ಯಹಾರಗಳನ್ನು ಮಾಡುವ ಉದ್ದೇಶದೊಂದಿಗೆ 21 ಹೆಸರುಗಳನ್ನಿಟ್ಟುಕೊಂಡಿರುವ ಮಾಫಿಯಾ ಡಾನ್ ದಾವೂದ್, ಕರಾಚಿಯಲ್ಲಿ ಮೂರು ವಿಳಾಸಗಳನ್ನು ಹೊಂದಿದ್ದಾನೆ. ಇದೆಲ್ಲದರ ಹೊರತಾಗಿಯೂ ದಾವೂದ್ ಭಾರತೀಯನಾಗಿಯೇ ಉಳಿದಿದ್ದಾನೆ.

1993ರಲ್ಲಿ 260 ಮಂದಿಯನ್ನು ಬಲಿ ಪಡೆದ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿಯಾಗಿರುವ ದಾವೂದ್, ಪಾಕ್‌ನಲ್ಲಿ ಕುಳಿತು ಕಳೆದ 23 ವರ್ಷಗಳಿಂದ ಭೂಗತ ಲೋಕವನ್ನು ಆಳುತ್ತಿದ್ದಾನೆ. ಆದರೆ, ಈ ಕುರಿತಾದ ಭಾರತದ ಆರೋಪವನ್ನು ಪಾಕಿಸ್ತಾನ ನಿರಾಕರಿಸುತ್ತಾ ಬಂದಿದೆ.

ನಿರ್ಭಂದಕ್ಕೆ ಗುರಿಯಾದ ಇತರ ಸಂಘಟನೆಗಳು:

ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಲಂ(ಎಲ್ ಟಿಟಿಇ), ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್, ಅಲ್‌ಖೈದಾ ಮತ್ತು ಇರಾಕ್‌ನ ಐಸಿಸ್ ಸೇರಿದಂತೆ ಇತರ ಉಗ್ರ ಸಂಘಟನೆಗಳ ಮೇಲೆ ಬ್ರಿಟನ್ ಆರ್ಥಿಕ ನಿರ್ಬಂಧ ಹೇರಿದೆ.