ಸೆರೆಸ್ ಅಂಗಳ ಜಾಲಾಡಲಿದೆ ‘ನಮ್ಮಣ್ಣ ಡಾನ್’..!

Dawn Mission: New Orbit, New Opportunities
Highlights

ಡಾನ್ ಗಗನನೌಕೆಯು ಒಳ ಸೌರಮಂಡಲದ ಏಕೈಕ ಕುಬ್ಜ ಗ್ರಹದ ಸಮೀಪಕ್ಕೆ ಹೊಗಿದೆ.  ಮಂಗಳ ಮತ್ತು ಗುರುಗ್ರಹದ ಮಧ್ಯದಲ್ಲಿರುವ ಸೆರೆಸ್ ಸೌರಮಂಡಲದ ಒಳಭಾಗದ ಏಕೈಕ ಕ್ಷುದ್ರಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಾಷಿಂಗ್ಟನ್(ಜೂ.1): ಡಾನ್ ಗಗನನೌಕೆಯು ಒಳ ಸೌರಮಂಡಲದ ಏಕೈಕ ಕುಬ್ಜ ಗ್ರಹದ ಸಮೀಪಕ್ಕೆ ಹೊಗಿದೆ.  ಮಂಗಳ ಮತ್ತು ಗುರುಗ್ರಹದ ಮಧ್ಯದಲ್ಲಿರುವ ಸೆರೆಸ್ ಸೌರಮಂಡಲದ ಒಳಭಾಗದ ಏಕೈಕ ಕ್ಷುದ್ರಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಡಾನ್ ಗಗನನೌಕೆ ಸೆರೆಸ್ ನ ಮೇಲ್ಮೆಯಿಂದ ಕೇವಲ ೫೦ ಕಿ.ಮೀ ಎತ್ತರದಲ್ಲಿ ಹಾದು ಹೋಗಲಿದೆ. ಈ ವೇಳೆ ಅಲ್ಲಿನ ಗಾಮಾ ಕಿರಣ ಮತ್ತು ನ್ಯೂಟ್ರಾನ್ ರೋಹಿತವನ್ನು ಸಂಗ್ರಹಿಸಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಸೆರೆಸ್ ನ ಮೇಲ್ಮೆಯ ರಾಸಾಯನಿಕ ಸಂಬಂಧಗಳ ವೈವಿಧ್ಯತೆಯ ಕುರಿತು ಹೆಚ್ಚಿನ ಮಾಹಿತಿ ಕೂಡ ದೊರೆಯಲಿದೆ.

ಸೆರೆಸ್ ನ ಕಡಿಮೆ ಕಕ್ಷಾ ಅವಧಿ ಕೂಡ ಅದರ ಆಳ ಅಧ್ಯಯನಕ್ಕೆ ಸಹಾಯ ಮಾಡಲಿದೆ ಎಂಬುದು ನಾಸಾ ಆಶಯ. ಅಂದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಸೆರೆಸ್ ನ್ನು ಸುತ್ತಲಿರುವ ಡಾನ್ ಗಗನನೌಕೆ, ಸಾಧ್ಯವಾದಷ್ಟೂ ಮಾಹಿತಿಯನ್ನು ಕಲೆ ಹಾಕಲಿದೆ.

ಡಾನ್ ನೌಕೆಯನ್ನು 2007 ರಲ್ಲಿ ಉಡಾವಣೆ ಮಾಡಲಾಗಿತ್ತು. ಸೌರಮಂಡಲದೊಳಗಿನ ಒಳನೋಟಗಳನ್ನು ಪತ್ತೆಹಚ್ಚಲು ಮತ್ತು ಪ್ರಮುಖ ಕ್ಷುದ್ರಗ್ರಹಗಳ ಪಟ್ಟಿಯ ಕುರಿತು ಡಾನ್ ಸಂಶೋಧನೆ ನಡೆಸುತ್ತಿದೆ. ಮಾರ್ಚ್ 2015 ರಲ್ಲಿ ಸೆರೆಸ್ ಕಕ್ಷೆಯಲ್ಲಿ ಡಾನ್ ಪ್ರವೇಶ ಮಾಡಿದೆ.

loader