ದಾವಣಗೆರೆ [ಜು.08] : ರಾಜ್ಯ ರಾಜಕೀಯದಲ್ಲಿ ದೊಡ್ಡ ಹೈ ಡ್ರಾಮಾ ನಡೆಯುತ್ತಿದೆ. ಹಲವು 14 ಶಾಸಕರು ರಾಜೀನಾಮೆ ನೀಡಿದ್ದು, ಹಲವು ಸಚಿವರು ಇದೇ ಹಾದಿ ತುಳಿದಿದ್ದಾರೆ. ಆದರೆ ನನ್ನನ್ನು ಮಾತ್ರ ಬೆಂಗಳೂರಿಗೆ ಬಾ ಎಂದು ಯಾರೂ ಕರೆದಿಲ್ಲ ಎಂದು ಕೈ ಹಿರಿಯ ಶಾಸಕ ಶಾಮನೂರು ಶಿವಸಂಕರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. 

ದಾವಣಗೆರೆಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ನಾನು ಬೆಂಗಳೂರಿಗೆ ಹೋಗುವುದಿಲ್ಲ. ಯಾಕೆಂದರೆ ನನ್ನನ್ನು ಯಾರೂ ಕೂಡ ಆಹ್ವಾನಿಸಿಲ್ಲ ಎಂದರು. 

ಸದ್ಯ ಮೈತ್ರಿ ಸರ್ಕಾರ ಏನಾಗುತ್ತದೆ ಎಂದು ಹೇಳಲಾಗುವುದಿಲ್ಲ. ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎನ್ನುವುದು ಸುಳ್ಳು ಸುದ್ದ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಶಿವಶಂಕರಪ್ಪ ಹೇಳಿದರು. 

ಇನ್ನು ಸಿಎಂ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಬಗ್ಗೆ ಪದೇ ಪದೇ ತಮ್ಮ ಬಳಿ ಪ್ರಶ್ನೆ  ಮಾಡುವುದನ್ನು ನಿಲ್ಲಿಸಿ ಎಂದು ಈ ವೇಳೆ ಶಿವಶಂಕರಪ್ಪ ಮನವಿ ಮಾಡಿದರು.