Asianet Suvarna News Asianet Suvarna News

ಸಾಲ ತೀರಿಸಲು ಪ್ರೇಮಿಗಳು ಏನು ಮಾಡಿದರು ಗೊತ್ತೆ ?

ಸಾಲ ತೀರಿಸಲು ಪ್ರೇಮಿಗಳು ಏನು ಮಾಡಿದರು ಗೊತ್ತೆ ?

Davanagere lovers crime story
  • Facebook
  • Twitter
  • Whatsapp

ದಾವಣಗೆರೆ(ಜೂ.21): ತಾವು ಮಾಡಿಕೊಂಡ ಸಾಲ ತೀರಿಸಲು ಪ್ರೇಮಿಗಳಿಬ್ಬರು ಪಕ್ಕದ ಮನೆಯಲ್ಲೇ ಕಳ್ಳತನಕ್ಕೆ ಯತ್ನಿಸಿ, ಸಿಕ್ಕಿಬಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ರವಿ ಎಂಬ ಯುವಕ ಮತ್ತು ಆತನ ಪ್ರೇಯಸಿ ಇಬ್ಬರು ಸೇರಿ, ದಾವಣಗೆರೆಯ ದೇವರಾಜ್ ಅರಸ್ ಬಡಾವಣೆಯ BSNL ಕ್ವಾಟ್ರಸ್ ನಲ್ಲಿ ಈ ಕೃತ್ಯ ಎಸಗಿದ್ದಾರೆ. ಸರೋಜಮ್ಮ ಎಂಬ  ಮಹಿಳೆ ಒಬ್ಬರೇ ಇರುವಾಗ ಒಳನುಗ್ಗಿದ  ಈ ಇಬ್ಬರು, ಮಹಿಳೆಯ ಮುಖಕ್ಕೆ ಕ್ರಿಮಿನಾಶಕ ಸ್ಪ್ರೇ ಎರಚಿದ್ದಾರೆ. ಬಳಿಕ ಪ್ರಜ್ಞೆತಪ್ಪಿದ ಮಹಿಳೆ ಸರೋಜಮ್ಮನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕದ್ದು ಪರಾರಿಯಾಗುವಾಗ ಅಕ್ಕಪಕ್ಕದ ಮನೆಯವರಿಗೆ ಸಿಕ್ಕಿಬಿದ್ದಿದ್ದಾರೆ. ಪ್ರೇಮಿಗಳಿಬ್ಬರನ್ನು ವಶಕ್ಕೆ ಪಡೆದ ಬಸವನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿದ್ದಾರೆ. ಇನ್ನು ಹಲ್ಲೆಗೊಳಗಾಗಿ ಗಾಯಗೊಂಡ ಸರೋಜಮ್ಮನನ್ನು ದಾವಣಗೆರೆಯ ಖಾಸಗಿ ಅಸ್ಪತ್ರೆ ಒಂದಕ್ಕೆ ದಾಖಲಿಸಲಾಗಿದೆ.

Follow Us:
Download App:
  • android
  • ios