ಸಂಸದ ಸುರೇಶ ಅಂಗಡಿ ಪುತ್ರಿ ಶೃದ್ಧಾ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪುತ್ರ ಸಂಕಲ್ಪ ಜೊತೆ ಇಂದು ನಿಶ್ಚಿತಾರ್ಥ ನೆರವೇರಿತು.
ಬೆಳಗಾವಿ (ಜೂ.04): ಸಂಸದ ಸುರೇಶ ಅಂಗಡಿ ಪುತ್ರಿ ಶೃದ್ಧಾ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪುತ್ರ ಸಂಕಲ್ಪ ಜೊತೆ ಇಂದು ನಿಶ್ಚಿತಾರ್ಥ ನೆರವೇರಿತು.
ಬೆಳಗಾವಿ ಅಂಗಡಿ ಕಾಲೇಜು ಸಭಾಂಗಣದಲ್ಲಿ ಅದ್ದೂರಿಗಾಗಿ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಸುರೇಶ್ ಅಂಗಡಿ ಹಾಗೂ ಜಗದೀಶ್ ಶೆಟ್ಟರ್ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ವಧು-ವರರಿಬ್ಬರು ಇಂಜಿನಿಯರಿಂಗ್ ಮಾಡಿದ್ದು ಇಂದು ನಿಶ್ಚಿತಾರ್ಥ ಮಾಡಿಕೊಂಡರು. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ. ಕೇಂದ್ರ ಸಚಿವ ಅನಂತಕುಮಾರ್. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ . ಲಕ್ಷ್ಮಣ್ ಸೌದಿ ಸೇರಿಂತೆ ಅನೇಕ ಅನೇಕ ನಾಯಕರು ಭಾಗಿಯಾಗಿದ್ದರು
