Asianet Suvarna News Asianet Suvarna News

ವೃದ್ಧರನ್ನು ನೋಡಿಕೊಳ್ಳದಿದ್ದರೆ ಅಳಿಯ , ಸೊಸೆಗೂ ಜೈಲು

ವೃದ್ಧ ಅಪ್ಪ ಅಮ್ಮಂದಿರನ್ನು ಮಕ್ಕಳು ನೋಡಿಕೊಳ್ಳದೆ ಇದ್ದರೆ ವಿಧಿಸಲಾಗುತ್ತಿದ್ದ ಜೈಲು ಶಿಕ್ಷೆಯನ್ನು ಹಾಲಿ ಇರುವ ೩ ತಿಂಗಳಿನಿಂದ 6 ತಿಂಗಳಿಗೆ ಏರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 

Daughter-in-Law,  Son-in-law too would be responsible for care of old

ನವದೆಹಲಿ: ವೃದ್ಧ ಅಪ್ಪ ಅಮ್ಮಂದಿರನ್ನು ಮಕ್ಕಳು ನೋಡಿಕೊಳ್ಳದೆ ಇದ್ದರೆ ವಿಧಿಸಲಾಗುತ್ತಿದ್ದ ಜೈಲು ಶಿಕ್ಷೆಯನ್ನು ಹಾಲಿ ಇರುವ 3 ತಿಂಗಳಿನಿಂದ 6 ತಿಂಗಳಿಗೆ ಏರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 

ಅಷ್ಟೇ ಅಲ್ಲ, ಪಾಲಕರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣೆ ಕಾಯ್ದೆ-2007 ರಲ್ಲಿ ಇರುವ ‘ಮಕ್ಕಳು’ ಎಂಬುದರ ವ್ಯಾಖ್ಯಾನವನ್ನು ಬದಲಿಸಿ ಅದಕ್ಕೆ ಅಳಿಯ ಹಾಗೂ ಸೊಸೆಯನ್ನೂ ಸೇರಿಸುವ ಸಾಧ್ಯತೆಯಿದೆ.

ಸದರಿ ಕಾಯ್ದೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪುನರ್‌ವಿಮರ್ಶೆ ಮಾಡುತ್ತಿದ್ದು, ಕೆಲ  ನಿಯಮಗಳನ್ನು ಬದಲಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ತಿದ್ದುಪಡಿ ಕಾಯ್ದೆಯು ಅಂಗೀಕಾರವಾದರೆ ಸದ್ಯ
ಪೋಷಕರನ್ನು ನೋಡಿಕೊಳ್ಳದೆ ಇರುವ ಮಕ್ಕಳು ನೀಡಬೇಕಾದ ಮಾಸಿಕ ನಿರ್ವಹಣಾ ವೆಚ್ಚಕ್ಕಿದ್ದ 10 ಸಾವಿರ ರು. ಮಿತಿಯೂ ರದ್ದಾಗಲಿದೆ. 

ಮಕ್ಕಳು ತಮ್ಮನ್ನು ನೋಡಿಕೊಳ್ಳದಿದ್ದರೆ ಹಿರಿಯ ನಾಗರಿಕರು ನಿರ್ವಹಣಾ ನ್ಯಾಯಾಧಿಕರಣಕ್ಕೆ ದೂರು ನೀಡಬಹುದು.

Follow Us:
Download App:
  • android
  • ios