ಆರ್‌ಎಸ್‌ಎಸ್‌ ಅತ್ಯುನ್ನತ ಸ್ಥಾನಕ್ಕೆ ಕನ್ನಡಿಗ ಹೊಸಬಾಳೆ ನೇಮಕ?

Dattatreya Hosabale to be Elevated as No 2 in RSS
Highlights

ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಅವರು ಶೀಘ್ರವೇ, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿನ 2ನೇ ಅತ್ಯುನ್ನತ ಹುದ್ದೆಯಾದ ಸರಕಾರ‍್ಯವಾಹಕ್ಕೆ ನೇಮಕಗೊಳ್ಳುವ ಸಾಧ್ಯತೆ ಇದೆ.

ನಾಗಪುರ: ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಅವರು ಶೀಘ್ರವೇ, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿನ 2ನೇ ಅತ್ಯುನ್ನತ ಹುದ್ದೆಯಾದ ಸರಕಾರ‍್ಯವಾಹಕ್ಕೆ ನೇಮಕಗೊಳ್ಳುವ ಸಾಧ್ಯತೆ ಇದೆ.

ಮಾ.9-11ರವರೆಗೆ ನಾಗಪುರದಲ್ಲಿ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಮ್ಮೇಳನ ನಡೆಯಲಿದ್ದು, ಅಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಹಾಲಿ ಸರಕಾರ‍್ಯವಾಹ ಸ್ಥಾನದಲ್ಲಿರುವ ಭಯ್ಯಾಜಿ ಜೋಷಿ ಅವರು ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ, ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಸ್ಥಾನಕ್ಕೆ ಸಂಘಟನೆಯಲ್ಲಿ ಯುವಸಮೂಹದ ಅಪಾರ ಬೆಂಬಲ ಹೊಂದಿರುವ ದತ್ತಾತ್ರೇಯ ಹೊಸಬಾಳೆ ಅವರನ್ನು ನೇಮಕ ಮಾಡಲು ಸಂಘದ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸರಸಂಘಚಾಲಕ, ಆರ್‌ಎಸ್‌ಎಸ್‌ನಲ್ಲಿ ನಂ.1 ಸ್ಥಾನವಾಗಿದ್ದರೆ, ಅದರ ನಂತರದ ಸ್ಥಾನ ಸರಕಾರ‍್ಯವಾಹಕದ್ದು. ಸಂಘದ ಎಲ್ಲಾ ದೈನಂದಿಕ ಕಾರ್ಯಚಟುವಟಿಕೆಗಳನ್ನು ನಂ.2 ಸ್ಥಾನದಲ್ಲಿ ಇರುವವರೇ ನಿರ್ವಹಿಸುತ್ತಾರೆ.

 

loader