Asianet Suvarna News Asianet Suvarna News

ಚಿಕ್ಕಮಗಳೂರಿನಲ್ಲಿ ಇಂದಿನಿಂದ ಮೂರು ದಿನಗಳ ದತ್ತ ಜಯಂತಿ-ಸೂಕ್ತ ಭದ್ರತೆ

ಈದ್'ಮಿಲಾದ್ ಕೂಡ  ಇದ್ದು, ಮುಸ್ಲಿಮರು ಮೆರವಣಿಗೆ ಕೂಡ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯಾಹ್ನದವರೆಗೆ  ಮುಸ್ಲಿಮರು ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿದೆ. ಮಧ್ಯಾಹ್ನ ನಂತರ ದತ್ತ ಜಯಂತಿಯ ಪ್ರಯುಕ್ತ ಶೋಭಾಯಾತ್ರೆಗೆ ಅನುಮತಿ ಕಲ್ಪಿಸಲಾಗಿದೆ.

Datta jayanthi begins today

ಚಿಕ್ಕಮಗಳೂರು(ಡಿ.1): ಇಂದಿನಿಂದ ಕಾಫಿನಾಡು ಚಿಕ್ಕಮಗಳೂರಿನಲ್ಲಿ  ಮೂರು ದಿನಗಳ ಕಾಲ ದತ್ತ ಜಯಂತಿ ಸಂಭ್ರಮ ಕಳೆಗಟ್ಟಲಿದೆ. ಆದರೆ, ನಾಳೆ, ದತ್ತ ಜಯಂತಿಯ ಅಂಗವಾಗಿ ಬೃಹತ್ ಶೋಭಾಯಾತ್ರೆ ನಡೆಸಲು ತೀರ್ಮಾನ ಮಾಡಲಾಗಿದೆ.  ಇದೇ ವೇಳೆ, ಈದ್'ಮಿಲಾದ್ ಕೂಡ  ಇದ್ದು, ಮುಸ್ಲಿಮರು ಮೆರವಣಿಗೆ ಕೂಡ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯಾಹ್ನದವರೆಗೆ  ಮುಸ್ಲಿಮರು ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿದೆ. ಮಧ್ಯಾಹ್ನ ನಂತರ ದತ್ತ ಜಯಂತಿಯ ಪ್ರಯುಕ್ತ ಶೋಭಾಯಾತ್ರೆಗೆ ಅನುಮತಿ ಕಲ್ಪಿಸಲಾಗಿದೆ.

ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ರೀತಿಯಾದ  ಅಹಿತಕರವಾದ ಘಟನೆಗಳು ಜರುಗದಂತೆ  3 ದಿನ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗುತ್ತಿದೆ.   ಅಲ್ಲದೇ ನಗರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳೂ ಕೂಡ ಮುಚ್ಚಿರಲಿವೆ.  ದತ್ತ ಜಯಂತಿ ಹಿನ್ನೆಲೆಯಲ್ಲಿ ಭದ್ರತೆಯನ್ನು ಒದಗಿಸುವ ಸಲುವಾಗಿ  ಓರ್ವ ಎಸ್ಪಿ, ಮೂವರು ಎಎಸ್ಪಿ, 10 ಡಿಎಸ್ಪಿ, 30 ಇನ್'ಸ್ಪೆಕ್ಟರ್ಸ್, 134 ಪಿಎಸ್'ಐ, 227 ಎಎಸೈ, 2000 ಪೇದೆಗಳ ಜೊತೆ 20 ಡಿಎಆರ್ ಹಾಗೂ 16 ಕೆಎಸ್‍ಆರ್‍'ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

Follow Us:
Download App:
  • android
  • ios