ನವರಾತ್ರಿ ಎಂದಾಕ್ಷಣ ನೆನಪಿಗೆ ಬರೋದು ಮನೆ ಮನೆಗಳಲ್ಲಿ ಗೊಂಬೆ ಕೂರಿಸುವುದು. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಪ್ರದಾಯ ತನ್ನ ಕಳೆ ಕಳೆದುಕೊಳ್ಳುತ್ತಿದೆ. ಆದರೆ ಜನರಿಗೆ ಅರಿವು ಮೂಡಿಸಿ, ಹಬ್ಬದ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ದೃಷ್ಟಿಯಿಂದ ನಗರದ ಗರುಡ ಮಾಲ್ ನಲ್ಲಿ ಸಂಪ್ರದಾಯಿಕ ಗೊಂಬೆಗಳನ್ನು ಕೂರಿಸಲಾಗಿದೆ.  

ಬೆಂಗಳೂರು (ಸೆ.22): ನವರಾತ್ರಿ ಎಂದಾಕ್ಷಣ ನೆನಪಿಗೆ ಬರೋದು ಮನೆ ಮನೆಗಳಲ್ಲಿ ಗೊಂಬೆ ಕೂರಿಸುವುದು. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಪ್ರದಾಯ ತನ್ನ ಕಳೆ ಕಳೆದುಕೊಳ್ಳುತ್ತಿದೆ. ಆದರೆ ಜನರಿಗೆ ಅರಿವು ಮೂಡಿಸಿ, ಹಬ್ಬದ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ದೃಷ್ಟಿಯಿಂದ ನಗರದ ಗರುಡ ಮಾಲ್ ನಲ್ಲಿ ಸಂಪ್ರದಾಯಿಕ ಗೊಂಬೆಗಳನ್ನು ಕೂರಿಸಲಾಗಿದೆ.

ಮಾಲ್'ನ ಒಳಗಡೆ ಪ್ರವೇಶಿಸುವ ಮುನ್ನವೇ 12/14 ಅಡಿ ಎತ್ತರದ ಈ ವಿಶೇಷ ದಸರಾ ಬೊಂಬೆಗಳು ನಿಮ್ಮನ್ನ ಆತ್ಮೀಯವಾಗಿ ಸ್ವಾಗತಿಸುತ್ತವೆ. ಈ ಬೊಂಬೆಗಳು ನಮ್ಮ ಬೊಂಬೆ ನಗರಿ ಎಂದೇ ಪ್ರತೀತಿ ಪಡೆದಿರುವ ಚನ್ನಪಟ್ಟಣವನ್ನು ಪ್ರತಿನಿಧಿಸುತ್ತವೆ. ಇಲ್ಲಿ ಮುಖ್ಯವಾಗಿ ನಮ್ಮ ಸಂಪ್ರದಾಯದಂತೆ ಮಾಲ್ ಒಳಗೆ ಸ್ವಾಗತಿಸಲು ಒಂದು ದ್ವಾರವನ್ನು ನಿರ್ಮಿಸಲಾಗಿದೆ.

ಇಂದು ಆರಂಭವಾದ ಈ ಗೊಂಬೆ ಕೂರಿಸುವ ಕಾರ್ಯಕ್ರಮಕ್ಕೆ ಭರ್ಜರಿ ನಟಿ ವೈಶಾಲಿ ದೀಪಿಕಾ ಚಾಲನೆ ನೀಡಿದ್ರು. ಮೈಸೂರಿಗೆ ಹೋಗಲಾಗದೇ ಇರುವವರು ಕೂಡ ಮಾಲ್ ಗೆ ಬಂದು ಸಂತಸ ವ್ಯಕ್ತಪಡಿಸಿದರು. ಹೊರಗಡೆಯಷ್ಟೆ ಅಲ್ಲದೆ ಮಾಲ್ ನ ಒಳಗಡೆಯ ಆವರಣದಲ್ಲಿಯೂ ಕೂಡ ಪೌರಾಣಿಕ ಕಥೆಗಳನ್ನು ಹೇಳುವ ಬೊಂಬೆಗಳನ್ನು ಇಡಲಾಗಿದೆ.