ಅಪಘಾತ ಬಳಿಕ ದರ್ಶನ್ ಫಸ್ಟ್ ರಿಯಾಕ್ಷನ್; ಫ್ಯಾನ್ಸ್‌ಗೆ ಕಳಕಳಿಯ ಮನವಿ
ಕಾರು ಅಪಘಾತವಾಗಿ ಮೈಸೂರು ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ದರ್ಶನ್ | ಆಸ್ಪತ್ರೆ ಬಳಿ ಧಾವಿಸುತ್ತಿರುವ ಅಭಿಮಾನಿಗಳು | ಆಸ್ಪತ್ರೆ ಬಳಿ ಧಾವಿಸದಂತೆ ಅಭಿಮಾನಿಗಳಿಗೆ ಮನವಿ
ಬೆಂಗಳೂರು (ಸೆ. 24): ಕಾರು ಅಪಘಾತವಾಗಿ ಮೈಸೂರು ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ರನ್ನು ಭೇಟಿ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆಸ್ಪತ್ರೆ ಬಳಿ ಜಮಾಯಿಸಲು ಯತ್ನಿಸುತ್ತಿದ್ದಾರೆ.
ದರ್ಶನ್ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ : ಕೊಲಂಬಿಯಾ ಆಸ್ಪತ್ರೆ ಸ್ಪಷ್ಟನೆ
ಅಭಿಮಾನಿಗಳಿಗೆ ಸ್ವತಃ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ನನಗೆ ಏನೂ ಆಗಿಲ್ಲ. ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದೇನೆ. ಯಾರೂ ಆಸ್ಪತ್ರೆ ಬಳಿ ಬರಬೇಡಿ. ಬೇರೆ ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ವಿನಂತಿಸಿಕೊಂಡಿದ್ದಾರೆ.
"
ದರ್ಶನ್ ಕಾರು ಅಪಘಾತ ಕೇಸ್ ಗೆ ಟ್ವಿಸ್ಟ್ನನ್ನ ಅನ್ನದಾತರಿಗೆ ಅರ್ಥಾತ್ ನನ್ನ ಅಭಿಮಾನಿಗಳಿಗೆ ತಿಳಿಸುವುದೇನೆಂದರೆ ನನಗೆ ಏನು ಆಗಿಲ್ಲ ನಾಳೆ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದೇನೆ ಆ ನಂತರ ನಿಮ್ಮೆಲ್ಲರನ್ನು ಕಾಣುತ್ತೇನೆ ದಯವಿಟ್ಟು ಯಾರೂ ಆಸ್ಪತ್ರೆಯ ಹತ್ತಿರ ಬರಬೇಡಿ ಆಸ್ಪತ್ರೆಯಲ್ಲಿರುವ ಬೇರೆ ರೋಗಿಗಳಿಗೆ ನನ್ನಿಂದ ತೊಂದರೆಯಾಗುವುದು ಸರಿಯಲ್ಲ ದಯಮಾಡಿ ಶಾಂತಿಯಿಂದಿರಿ’ pic.twitter.com/x0cDN0PWGJ
— D Company(R)Official (@Dcompany171) September 24, 2018