ಜಿಲ್ಲಾಡಳಿತದ ಮಾಹಿತಿ ಪ್ರಕಾರ ಈ ಕಟ್ಟಡಗಳನ್ನ ನೆಲಸಮ ಮಾಡದೇ ಒತ್ತುವರಿ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ಈ ಆಸ್ತಿಗಳನ್ನ ಮತ್ತೆ ಹರಾಜು ಹಾಕಲು ನಿರ್ಧರಿಸುವ ಸಾಧ್ಯತೆಗಳಿವೆಯಂತೆ. ಸರ್ಕಾರ ಅವಕಾಶ ನೀಡಿದ್ದಲ್ಲಿ ಧನಿಕರು ಹಾಗೂ ಪ್ರಭಾವಿಗಳು ಒತ್ತುವರಿ ಜಾಗವನ್ನು ಸರ್ಕಾರಿ ಹರಾಜಿನಲ್ಲಿ ಮತ್ತೆ ಕೊಂಡುಕೊಳ್ಳುವ ಸಾಧ್ಯತೆಯಿದೆ. ಹಾಗಾದ್ರೆ ಬಡವರ ಪಾಡೇನು?
ಬೆಂಗಳೂರು(ಅ.23): ಅಂತೂ ಇಂತೂ ರಾಜಾಕಾಲುವೆ ಒತ್ತುವರಿ ಜಾಗದಲ್ಲಿದ್ದ ದರ್ಶನ್ ಮನೆಯನ್ನ ಬಿಬಿಎಂಪಿ ವಶಕ್ಕೆ ಪಡೆದಿದೆ. ನಿವಾಸದೆದುರು ಇಂದು ಸರ್ಕಾರಿ ಸ್ವತ್ತು ಎಂದು ಬೋರ್ಡ್ ಕೂಡಲಾಗಿದೆ. ಹಾಗಾದ್ರೆ, ಮುಂದೇನಾಗುತ್ತೆ. ಬೇರೆ ಮನೆಗಳ ೊತ್ತುವರಿ ತೆರವು ರೀತಿಯೇ ದರ್ಶನ್ ಮನೆ ಉರುಳಿಸಲಾಗುತ್ತಾ..? ಖಂಡಿತಾ ಇಲ್ಲ.
ಜಿಲ್ಲಾಡಳಿತದ ಮಾಹಿತಿ ಪ್ರಕಾರ ಈ ಕಟ್ಟಡಗಳನ್ನ ನೆಲಸಮ ಮಾಡದೇ ಒತ್ತುವರಿ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ಈ ಆಸ್ತಿಗಳನ್ನ ಮತ್ತೆ ಹರಾಜು ಹಾಕಲು ನಿರ್ಧರಿಸುವ ಸಾಧ್ಯತೆಗಳಿವೆಯಂತೆ. ಸರ್ಕಾರ ಅವಕಾಶ ನೀಡಿದ್ದಲ್ಲಿ ಧನಿಕರು ಹಾಗೂ ಪ್ರಭಾವಿಗಳು ಒತ್ತುವರಿ ಜಾಗವನ್ನು ಸರ್ಕಾರಿ ಹರಾಜಿನಲ್ಲಿ ಮತ್ತೆ ಕೊಂಡುಕೊಳ್ಳುವ ಸಾಧ್ಯತೆಯಿದೆ. ಹಾಗಾದ್ರೆ ಬಡವರ ಪಾಡೇನು?
ದರ್ಶನ್ ಮನೆ ಮುಂದೆ ಸರ್ಕಾರಿ ಜಾಗ ಅಂತ ನೋಟೀಸ್ ಬರೆಯಲಾಗಿದೆ. ಉಳಿದಂತೆ ದರ್ಶನ್ ಚರಸ್ತಿಗಳನ್ನ ಮನೆಯಿಂದ ಹೊರಗೆ ಹಾಕಲು ಟೈಮ್ ಫಿಕ್ಸ್ ಮಾಡಿಲ್ಲ. ಒಟ್ನಲ್ಲಿ ದರ್ಶನ್ ಈ ಮನೆಯಲ್ಲಿ ಇನ್ನೆಷ್ಟು ದಿನ ಇರ್ತಾರೆ ಅನ್ನೋದೇ ಸದ್ಯದ ಕುತೂಹಲ.