ಹಸುವಿನ ಹಾಲನ್ನು ಗಟ್ಟಿಯಾಗಿಸಲು ಕೆಮಿಕಲ್ಸ್ ಹಾಗೂ ಇಂಜೆಕ್ಷನ್’ಗಳನ್ನು  ಉಪಯೋಗಿಸಲಾಗುತ್ತದೆ. ಇದರಿಂದ ಇಲ್ಲಿನ ಜನತೆ ಹಾಲೆಂದು ಹಾಲಾಹಲವನ್ನು ಬಳಕೆ ಮಾಡುತ್ತಿದ್ದು, ಅಪಾಯಕಾರಿ ವಿದ್ಯಮಾನದಿಂದ  ಜನರು ಹೆಚ್ಚು ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ.

ಬೆಳಗಾವಿ(ಡಿ.1): ಪ್ಯಾಕೇಟ್ ಹಾಲು ಬೇಡ ಎಂದು ಹಸು ಸಾಕುತ್ತಿರುವವರ ಬಳಿ ಹಾಲನ್ನು ಕೊಳ್ಳುತ್ತಿದ್ದರೆ ಇಲ್ಲೊಮ್ಮೆ ಗಮನಿಸೋದು ಉತ್ತಮ. ಯಾಕೆಂದರೆ ಬೆಳಗಾವಿಯಲ್ಲಿ ಹಾಲಿಗೆ ಭಯಾನಕವಾದ ಕೆಮಿಕಲ್’ಗಳನ್ನು ಮಿಕ್ಸ್ ಮಾಡುತ್ತಿರುವ ದಂಧೆಯೊಂದನ್ನು ಸುವರ್ಣ ನ್ಯೂಸ್ ಬಯಲಿಗೆ ಎಳೆದಿದೆ. ಹಸುವಿನ ಹಾಲನ್ನು ಗಟ್ಟಿಯಾಗಿಸಲು ಕೆಮಿಕಲ್ಸ್ ಹಾಗೂ ಇಂಜೆಕ್ಷನ್’ಗಳನ್ನು ಉಪಯೋಗಿಸಲಾಗುತ್ತದೆ.

ಇದರಿಂದ ಇಲ್ಲಿನ ಜನತೆ ಹಾಲೆಂದು ಹಾಲಾಹಲವನ್ನು ಬಳಕೆ ಮಾಡುತ್ತಿದ್ದು, ಅಪಾಯಕಾರಿ ವಿದ್ಯಮಾನದಿಂದ ಜನರು ಹೆಚ್ಚು ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ.