ಸ್ಯಾಂಡಲ್ವುಡ್'ಗೆ ಮಹೋನ್ನತ ಸಿನಿಮಾಗಳನ್ನು ಕೊಟ್ಟ ರಾಜ್ ಕುಟುಂಬದ ಮೂವರು ಆಧಾರ ಸ್ತಂಭಗಳು ನಿಧನರಾಗಿದ್ದು ಬುಧವಾರವೇ ಎಂಬುದು ಅಚ್ಚರಿ. ಡಾ. ರಾಜ್'ಕುಮಾರ್ ಮತ್ತು ಅವರ ಸಹೋದರ ವರದರಾಜ್ ಕೂಡ ಬುಧವಾರದಂದೇ ಇಹಲೋಕ ತ್ಯಜಿಸಿದ್ದರು. ಇದು ಕಾಕತಾಳೀಯವಾದರೂ ಅಚ್ಚರಿ ಮೂಡಿಸುವ ಸಂಗತಿ.
ಬೆಂಗಳೂರು(ಮೇ 31): ಪಾರ್ವತಮ್ಮ ರಾಜಕುಮಾರ್ ಇಂದು ಬುಧವಾರ ವಿಧಿವಶರಾಗಿದ್ದಾರೆ. ದಶಕಗಳ ಕಾಲ ಕನ್ನಡ ಚಿತ್ರರಂಗದ ಆಧಾರಸ್ತಂಭವಾಗಿದ್ದ ದೊಡ್ಮನೆ ಅಮ್ಮ ಇನ್ನಿಲ್ಲವಾಗಿದ್ದಾರೆ. ಸ್ಯಾಂಡಲ್ವುಡ್'ಗೆ ಮಹೋನ್ನತ ಸಿನಿಮಾಗಳನ್ನು ಕೊಟ್ಟ ರಾಜ್ ಕುಟುಂಬದ ಮೂವರು ಆಧಾರ ಸ್ತಂಭಗಳು ನಿಧನರಾಗಿದ್ದು ಬುಧವಾರವೇ ಎಂಬುದು ಅಚ್ಚರಿ. ಡಾ. ರಾಜ್'ಕುಮಾರ್ ಮತ್ತು ಅವರ ಸಹೋದರ ವರದರಾಜ್ ಕೂಡ ಬುಧವಾರದಂದೇ ಇಹಲೋಕ ತ್ಯಜಿಸಿದ್ದರು. ಇದು ಕಾಕತಾಳೀಯವಾದರೂ ಅಚ್ಚರಿ ಮೂಡಿಸುವ ಸಂಗತಿ.
ಮೃತಪಟ್ಟ ದಿನ:
ವರದರಾಜ್(ಡಾ.ರಾಜ್ ಸೋದರ): 08 ಫೆಬ್ರವರಿ 2006 - ಬುಧವಾರ
ಡಾ.ರಾಜಕುಮಾರ್: 12 ಏಪ್ರಿಲ್ 2006 - ಬುಧವಾರ
ಪಾರ್ವತಮ್ಮ ರಾಜಕುಮಾರ್: 31 ಮೇ 2017 - ಬುಧವಾರ
