ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಕೊಲೆ ಮಾಡಿ ಇಡೀ ಮನೆಯನ್ನ ದೋಚುತ್ತಿದ್ದ ದಂಡುಪಾಳ್ಯ ಹಂತಕರಿಗೆ ಕೊಂಚ ರಿಲೀಫ್ ದೊರೆತಿದೆ.
ಬೆಂಗಳೂರು (ಸೆ.04): ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಕೊಲೆ ಮಾಡಿ ಇಡೀ ಮನೆಯನ್ನ ದೋಚುತ್ತಿದ್ದ ದಂಡುಪಾಳ್ಯ ಹಂತಕರಿಗೆ ಕೊಂಚ ರಿಲೀಫ್ ದೊರೆತಿದೆ.
1999 ರಲ್ಲಿ ಬೆಂಗಳೂರಿನ ಸುಧಾಮಣಿ ಕೊಲೆ ಪ್ರಕರಣಕ್ಕೆ ಅಧೀನ ನ್ಯಾಯಾಲಯ ಈ ಹಿಂದೆಯೇ ಆರೋಪಿಗಳಿಗೆ ಗಲ್ಲು ಶಿಕ್ಷೆ ಪ್ರಕಟಿಸಿತ್ತು. ಈ ಆದೇಶವನ್ನ ಪ್ರಶ್ನಿಸಿ, ಹೈ ಕೊರ್ಟ್ ಮೊರೆ ಹೋಗಿದ್ದ, ದಂಡು ಪಾಳ್ಯ ಹಂತಕರ ಮನವಿಯನ್ನ ಹೈಕೊರ್ಟ್ ಪರಿಗಣಿಸಿದೆ. ನ್ಯಾಯಮೂರ್ತಿ ರವಿ ಮಳಿಮಠ್ ಹಾಗೂ ಮೈಕಲ್ ಡಿ ಕುನ್ಹಾ ನ್ಯಾಯಾದೀಶರಿದ್ದ ವಿಭಾಗೀಯ ಪೀಠ, ಆರೋಪಿಗಳಿಗೆ ಗಲ್ಲು ಶಿಕ್ಷೆ ರದ್ದುಗೊಳಿಸಿದೆ. ಬದಲಾಗಿ, ಆರೋಪಿಗಳಾದ, ನಲ್ಲ ತಿಮ್ಮ. ಲಕ್ಷ್ಮಿ, ಮುನಿಕೃಷ್ಣ, ವೆಂಕಟೇಶ್ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ,. ಈ ಮೂಲಕ, ಗಲ್ಲು ಶಿಕ್ಷೆಯಿಂದ ಪಾರಾದ ಆರೋಪಿಗಳು ಜೀವಾವಧಿ ಶಿಕ್ಷೆಗೆ ತೃಪ್ತಿ ಪಟ್ಟಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರೂ, ಇನ್ನೂ ಮೂರು ಕೊಲೆ ಪ್ರಕರಣಗಳ ಸಂಬಂಧ, ಹೈಕೊರ್ಟ್ ತೀರ್ಪು ಹೊರಬೀಳಬೇಕಿದೆ.
