ನವದೆಹಲಿ :  ರಸ್ತೆ ಅಪಘಾತಕ್ಕೆ ಒಳಗಾದವರಿಗೆ ನೀಡುವ ಪರಿಹಾರದ ಮೊತ್ತವನ್ನು ಸರ್ಕಾರವು 10 ಪಟ್ಟು ಏರಿಕೆ ಮಾಡಿದೆ. 

ಅಪಘಾತದ ವೇಳೆ ಮೃತಪಟ್ಟಾಗ, ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದಾಗ, ಸಣ್ಣ ಪುಟ್ಟ ಗಾಯಗಳಾದಾಗ ಅವರ ವಯಸ್ಸು, ಆದಾಯ ವಿಚಾರಗಳನ್ನೂ ಕೂಡ ಪರಿಗಣನೆಗೆ ತೆಗೆದುಕೊಳ್ಳದೇ ಪರಿಹಾರವನ್ನು ನೀಡಲಾಗುತ್ತದೆ.  
ಅಲ್ಲದೇ ಇದರಲ್ಲಿ ಯಾರದ್ದು ತಪ್ಪು ಎನ್ನುವ ವಿಚಾರವನ್ನೂ ಕೂಡ ಪರಿಹಾರ ನೀಡುವ ವೇಳೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. 

ಸಾರಿಗೆ ಸಚಿವಾಲಯದಿಂದ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ ಟ್ರಿಬ್ಯೂನಲ್ ಅಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಹೊಸ ನಿಯಮಾವಳಿಗಳ ಪ್ರಕಾರವಾಗಿ  ರಸ್ತೆ ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದಲ್ಲಿ 5 ಲಕ್ಷದವರೆಗೂ ನೀಡಲಾಗುತ್ತದೆ.  

ಸದ್ಯ  ಅಪಘಾತದಲ್ಲಿ ಮೃತರಾದಲ್ಲಿ  50 ಸಾವಿರ ಹಾಗೂ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದಲ್ಲಿ, 25 ಸಾವಿರ ಪರಿಹಾರವನ್ನು ನೀಡಲಾಗುತ್ತಿತ್ತು. ಆದರೆ ಸದ್ಯ ಈ ಪ್ರಮಾಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. 

ದೇಶದಲ್ಲಿ ಪ್ರತೀ ವರ್ಷವೂ ಕೂಡ ರಸ್ತೆ ಅಪಘಾತದಲ್ಲಿ 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಅಲ್ಲದೇ 5 ಲಕ್ಷ ಮಂದಿ ಗಾಯಗೊಳ್ಳುತ್ತಿದ್ದಾರೆ.