ಕುಶಿನಗರಕ್ಕೆ ಗುರುವಾರ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್‌ ಅವರು ಮೈನ್‌ಪುರ ಕೋಟ್‌ ಗ್ರಾಮದ ಮುಷರ್‌ ಸಮುದಾಯಕ್ಕೆ ಭೇಟಿ ನಿರ್ಧಾರವಾಗಿತ್ತು. ಹಾಗಾಗಿ, ಯೋಗಿ ಭೇಟಿಗೂ ಮುನ್ನ ಗ್ರಾಮ​ಕೆ ಭೇಟಿ ನೀಡಿದ ಅಧಿಕಾರಿಯೊಬ್ಬರು, ಸೋಪು, ತಲೆಗೆ ಶಾಂಪೂ ಮತ್ತು ಸೆಂಟ್‌ ವಿತರಿಸಿದ್ದಾರೆ.

ಲಖನೌ: ಸಿಎಂ ಭೇಟಿಗೂ ಮುನ್ನ ಸೋಪಿನಿಂದ ಸ್ನಾನ ಮಾಡಿ, ಮೈಗೆ ಸೆಂಟ್‌ ಹಾಕಿ​ಕೊ​ಳ್ಳು​ವಂತೆ ಅಧಿ​ಕಾ​ರಿ​ಗಳು ದಲಿ​ತ​ರಿಗೆ ಸೂಚಿ​ಸಿದ ಅಮಾ​ನ​ವೀಯ ಘಟನೆ ಉತ್ತ​ರ​ಪ್ರ​ದೇ​ಶದಲ್ಲಿ ನಡೆ​ದಿ​ದೆ.

ಕುಶಿನಗರದಲ್ಲಿ ಸಾಂಪ್ರದಾಯಿಕವಾಗಿ ಇಲಿ ಹಿಡಿದು ಜೀವನ ಸಾಗಿಸುವ ದಲಿತ ಕುಟುಂಬಗಳಿಗೆ ಅಧಿಕಾರಿಗಳು ಹೀಗೆ ಸೂಚಿಸಿದ್ದಾರೆ.