ಹಿರಿಯ ಮಗನೊಬ್ಬ ಮುಸ್ಲಿಂ ಯುವತಿಯೊಂದಿಗೆ ಓಡಿ ಹೋಗಿದ್ದ ಕಾರಣ, ಆತನ ತಂದೆ ಹಾಗೂ ತಮ್ಮನನ್ನು ಮರಕ್ಕೆ ಕಟ್ಟಿ ಹಾಕಿ, ಮನ ಬಂದಂತೆ ಥಳಿಸಿರುವ ಅಮಾನುಷ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ(ಜೂ.28): ಹಿರಿಯ ಮಗನೊಬ್ಬ ಮುಸ್ಲಿಂ ಯುವತಿಯೊಂದಿಗೆ ಓಡಿ ಹೋಗಿದ್ದ ಕಾರಣ, ಆತನ ತಂದೆ ಹಾಗೂ ತಮ್ಮನನ್ನು ಮರಕ್ಕೆ ಕಟ್ಟಿ ಹಾಕಿ, ಮನ ಬಂದಂತೆ ಥಳಿಸಿರುವ ಅಮಾನುಷ ಘಟನೆ ವಿಜಯಪುರದಲ್ಲಿ ನಡೆದಿದೆ.
ಜಿಲ್ಲೆಯ ಸಿಂದಗಿ ತಾಲೂಕಿನ ಹಾಳಗುಂಡಕನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮರಿಯಪ್ಪ ಎಂಬುವವರ ಪುತ್ರ ನಿಂಗಪ್ಪ ಹರಿಜನ ಎಂಬಾತ ಅದೇ ಗ್ರಾಮದ ಮಾಬುಸಾಬ್ ಎಂಬುವವರ ಪುತ್ರಿ ಮಾಶಾಬಿ ಅನ್ನೋಳ ಜೊತೆ ಪರಾರಿಯಾಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಾಬುಸಾಬ್ ಹಾಗೂ ಆತನ ಅಣ್ಣ ಅಲ್ಲಾಭಕ್ಷ ಸೇರಿದಂತೆ ಒಟ್ಟು 7 ಜನರ ತಂಡ ಮರಿಯಪ್ಪ ಹಾಗೂ ಆತನ ಚಿಕ್ಕ ಮಗ ರಮೇಶನನ್ನು ಗ್ರಾಮದ ಆಲದ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ.
ಈ ಅಮಾನವೀಯ ಘಟನೆ ಊರಿನ ನಡು ಬೀದಿಯಲ್ಲೇ ನಡೆಯುತ್ತಿದ್ದರೂ ಸಹ, ಯಾರೊಬ್ಬರೂ ಬಿಡಿಸದೇ ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತ ದೃಶ್ಯಮೊಬೈಲ್ನಲ್ಲಿ ಸೆರೆಯಾಗಿದೆ. ಇನ್ನು ಹಲ್ಲೆಯಿಂದ ಮರಿಯಪ್ಪನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
