ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಗರ್ಬಾ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ 21ರ ಹರೆಯದ ದಲಿತ ಯುವಕನನ್ನು ಗುಂಪೊಂದು ಹೊಡೆದು ಸಾಯಿಸಿದ ಘಟನೆ ನಡೆದಿದೆ.
ಅಹಮದಾಬಾದ್: ಗುಜರಾತ್ನ ಆನಂದ್ ಜಿಲ್ಲೆಯಲ್ಲಿ ಗರ್ಬಾ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ 21ರ ಹರೆಯದ ದಲಿತ ಯುವಕನನ್ನು ಗುಂಪೊಂದು ಹೊಡೆದು ಸಾಯಿಸಿದ ಘಟನೆ ನಡೆದಿದೆ. ಜಯೇಶ್ ಸೋಳಂಕಿ ಮತ್ತು ಇತರ ಮೂವರು ದಲಿತ ಯುವಕರು ಭದ್ರಾನಿಯಾ ಗ್ರಾಮದ ದೇವಸ್ಥಾನದ ಸಮೀಪದ ಮನೆಯೊಂದರ ಬಳಿ ಕುಳಿತು ಗರ್ಬಾ ನೋಡುತ್ತಿದ್ದರು.
ಈ ವೇಳೆ ಆರೋಪಿಗಳು, ದಲಿತರಿಗೆ ಗರ್ಬಾ ನೋಡುವ ಹಕ್ಕಿಲ್ಲ ಎಂದು ಜಾತಿ ನಿಂದನೆ ಮಾಡಿ, ದಲಿತರ ಮೇಲೆ ಹಲ್ಲೆ ನಡೆಸಿದರು. ತಲೆಗೆ ಏಟಾದ ಜಯೇಶ್ ಸಾವಿಗೀಡಾಗಿದ್ದಾನೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.
(ಸಾಂದರ್ಭಿಕ ಚಿತ್ರ)
