Asianet Suvarna News Asianet Suvarna News

ದಲಿತ ಉದ್ಯಮಿಗಳಾಗಲು ಪ್ರೇರೇಪಿಸಲು ನಿಯತಕಾಲಿಕೆ

ಮೊದಲ ಆವೃತ್ತಿ ಯು ಇನ್ನೊಂದು ವಾರದಲ್ಲಿ ಆನ್ಲೈನ್ನಲ್ಲಿ ಭ್ಯವಿರುತ್ತದೆ. ಮೊದಲ ಆವೃತ್ತಿಯಲ್ಲಿ 18 ದಲಿತ ಉದ್ಯಮಿಗಳ ಪರಿಚಯ ಮಾಡಿಕೊಡಲಾಗಿದೆ

Dalit entrepreneurs get their own business magazine

ನವದೆಹಲಿ(ಅ.29): ದಲಿತ ಉದ್ಯಮಿಗಳ ಯಶಸ್ಸನ್ನು ಸಂಭ್ರಮಿಸಿ, ಸಮುದಾಯದ ಇತರ ಜನರು ಉದ್ಯಮಿಗಳಾಗುವಂತೆ ಪ್ರೇರೇಪಿಸುವ ಸಲುವಾಗಿ ‘ದ ದಲಿತ್ ಎಂಟರ್ ಪ್ರೈಸಸ್’ ಎಂಬ ನಿಯತಕಾಲಿಕೆಯೊಂದನ್ನು ಬಿಡುಗಡೆ ಮಾಡಲಾಗಿದೆ.

116 ಪುಟಗಳನ್ನು ಹೊಂದಿರುವ ಮೊದಲ ಮಾಸಿಕ ನಿಯತಕಾಲಿಕೆ ಅಂಗಡಿಗಳಲ್ಲಿ ಲಭ್ಯವಿರುವುದಿಲ್ಲ. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ದ ಸದಸ್ಯರಿಗೆ ಹಂಚಲಾಗುತ್ತದೆ.

ಮೊದಲ ಆವೃತ್ತಿ ಯು ಇನ್ನೊಂದು ವಾರದಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಮೊದಲ ಆವೃತ್ತಿಯಲ್ಲಿ 18 ದಲಿತ ಉದ್ಯಮಿಗಳ ಪರಿಚಯ ಮಾಡಿಕೊಡಲಾಗಿದೆ. ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ದಲಿತ ಉದ್ಯಮಿ ಚಂದ್ರ ಭಾನ್ ಪ್ರಸಾದ್ ಈ ನಿಯತಕಾಲಿಕೆಯ ಸಂಪಾದಕರಾಗಿದ್ದಾರೆ. ಆಫ್ರಿಕಾ- ಅಮೆರಿಕ ಉದ್ಯಮಿಗಳ ಯಶೋಗಾಥೆಯನ್ನು ಬಿಂಬಿಸುವ ಸಲುವಾಗಿ 1970ರಲ್ಲಿ ಅಮೆರಿಕದಲ್ಲಿ ‘ಬ್ಲ್ಯಾಕ್ ಎಂಟರ್‌ಪ್ರೈಸಸ್’ ಎಂಬ ನಿಯತಕಾಲಿಕೆ ಹೊರತರಲಾಗಿತ್ತು. ಅದರಿಂದ ಪ್ರೇರಿತವಾಗಿ ಈ ನಿಯತಕಾಲಿಕೆ ರೂಪಿಸಲಾಗಿದೆ.

Follow Us:
Download App:
  • android
  • ios