ಬೆಂಗಳೂರು, ಜೂನ್ 15: ಹೀಗೆ..ಹಿಗ್ಗಾ ಮುಗ್ಗಾ ದಂಡನೆಗೆ ಒಳಗಾಗುತ್ತಿರುವ ಯುವಕರು ಮಾಡಿದ್ದಾರರೂ ಏನು? ಸವರ್ಣಿಯರಿಗೆ ಸೇರಿದ ಬಾವಿಯಲ್ಲಿ ಸ್ನಾನ ಮಾಡುತ್ತಿದ್ದ ಇವರನ್ನು ಹೀಗೆ ದಂಡನೆಗೆ ಒಳಪಡಿಸುತ್ತಿರುವುದು ಮಾನವತೆಯ ಸಾವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದ ಊರೊಂದರಲ್ಲಿ ದಲಿತ ಯುವಕರನ್ನು ಅರೆಬೆತ್ತಲೆಯಾಗಿ ಥಳಿಸಿದ ಪ್ರಕರಣಕ್ಕೆ ಖೇದ ವ್ಯಕ್ತಪಡಿಸಿರುವ ರಾಹುಲ್ ಅದೇ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆರ್ ಎಸ್ ಎಸ್ ಮತ್ತು ಬಿಜೆಪಿಯ ಮನುವಾದದ ವಿರುದ್ಧ ನಾವು ಧ್ವನಿ ಎತ್ತದಿದ್ದರೆ ಇತಿಹಾಸ ನಮ್ಮನ್ನೂ ಎಂದಿಗೂ ಕ್ಷಮಿಸುವುದಿಲ್ಲ ಎಂದಿದ್ದಾರೆ.