ಯಡಿಯೂರಪ್ಪ ತಾವು ಕರೆದ ಸುದ್ದಿಗೋಷ್ಟಿಯನ್ನು ರದ್ದುಪಡಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು, ಡೈರಿಯನ್ನು ಅವರೇ ಸೃಷ್ಟಿ ಮಾಡಿದ್ದಾರೆ ಎಂದು ಪೂಜಾರಿ ಹೇಳಿದ್ದಾರೆ.
ಮಂಗಳೂರು (ಫೆ.24): ಡೈರಿ ಬಿಡುಗಡೆ ಪ್ರಕರಣ ರಾಜ್ಯ ಸರ್ಕಾರವನ್ನು ಮುಗಿಸುವ ಸಂಚು ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಡೈರಿ ಬಿಡುಗಡೆ ವಿಚಾರದಲ್ಲಿ ಕೇವಲ ಯಡಿಯೂರಪ್ಪ ಭಾಗಿಯಲ್ಲ. ಇವರ ಜೊತೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಪ್ರಧಾನಿ ಮೋದಿ ಅವರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪ ತಾವು ಕರೆದ ಸುದ್ದಿಗೋಷ್ಟಿಯನ್ನು ರದ್ದುಪಡಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು, ಡೈರಿಯನ್ನು ಅವರೇ ಸೃಷ್ಟಿ ಮಾಡಿದ್ದಾರೆ ಎಂದು ಪೂಜಾರಿ ಹೇಳಿದ್ದಾರೆ.
ಡೈರಿ ಹೇಗೆ ಅವರ ಕೈ ಸೇರಿತು ಎಂಬುದನ್ನು ಡೈರಿಯ ಕುರಿತ ಸಮಗ್ರ ವಿವರದ ಜೊತೆ ನೀಡುವಂತೆ ಆಗ್ರಹಿಸಿದರು. ಮಾಧ್ಯಮ ಮತ್ತು ಇತರ ಪಕ್ಷಗಳ ನಾಯಕರ ಹೆಸರುಗಳೂ ಇವೆ ಎಂಬ ಶಂಕೆ ಇದೆ. ಒಟ್ಟಾರೆ ಪ್ರಕರಣದ ಬಗ್ಗೆ ಸುಪ್ರೀಂ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಪೂಜಾರಿ ಆಗ್ರಹಿಸಿದರು.