ಉಡುಪಿಯ ಮಣಿಪಾಲದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರು ಮಾತನಾಡಿ, ಸಹಾರ ಡೈರಿಯಲ್ಲಿ ಪ್ರಧಾನಿ ಹೆಸರಿದೆ. ಅದರ ಬಗ್ಗೆ ಯಾಕೆ ಏನು ಹೇಳ್ತಾ ಇಲ್ಲ, ಎರಡೂ ಪ್ರಕರಣದ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ.
ಉಡುಪಿ (ಫೆ.28): ಕಾಂಗ್ರೆಸ್ ಡೈರಿ ಸ್ಫೋಟ ವಿಚಾರವು ರಾಜಕೀಯ ಪ್ರೇರಿತವಾಗಿದ್ದು, ಚುನಾವಣೆ ಬಂದಾಗ ಡೈರಿಯಂತಹ ವಿಚಾರಗಳು ಬರುತ್ತೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ.
ಉಡುಪಿಯ ಮಣಿಪಾಲದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರು ಮಾತನಾಡಿ, ಸಹಾರ ಡೈರಿಯಲ್ಲಿ ಪ್ರಧಾನಿ ಹೆಸರಿದೆ. ಅದರ ಬಗ್ಗೆ ಯಾಕೆ ಏನು ಹೇಳ್ತಾ ಇಲ್ಲ, ಎರಡೂ ಪ್ರಕರಣದ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಡಾ. ಪಾಟೀಲ್ ಹೇಳಿದ್ದಾರೆ.