ದಲಿತರು ನೀಡುವ ಹಾಲು ಸ್ವೀಕರಿಸದೆ ಹಾಲು ಉತ್ಪಾದಕರ ಕೇಂದ್ರದವರು ಅಸ್ಪಶ್ಯತೆ ಆಚರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಎ.ಗುಟ್ಟಹಳ್ಳಿಯ ದಲಿತ ಕಾಲೋನಿ ನಿವಾಸಿಗಳು ಸೋಮವಾರ ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.

ಚಿಂತಾಮಣಿ: ದಲಿತರು ನೀಡುವ ಹಾಲು ಸ್ವೀಕರಿಸದೆ ಹಾಲು ಉತ್ಪಾದಕರ ಕೇಂದ್ರದವರು ಅಸ್ಪಶ್ಯತೆ ಆಚರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಎ.ಗುಟ್ಟಹಳ್ಳಿಯ ದಲಿತ ಕಾಲೋನಿ ನಿವಾಸಿಗಳು ಸೋಮವಾರ ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.

ಗ್ರಾಮದಲ್ಲಿರುವ ಹಾಲು ಉತ್ಪಾದಕರ ಕೇಂದ್ರಕ್ಕೆ ದಲಿತರು ಹಾಲು ಸರಬರಾಜು ಮಾಡಿದರೆ ಅದನ್ನು ಸ್ವೀಕರಿಸುತ್ತಿಲ್ಲ. ಈ ಮೂಲಕ ದಲಿತ ವಿರೋಧಿ ನೀತಿ ಅನುಸರಿಸಲಾಗುತ್ತಿದೆಂದು ಕೃಷ್ಣಾರೆಡ್ಡಿ, ಜಿ.ವಿ.ನಾಗರಾಜ್, ವೆಂಕಟಸ್ವಾಮಿ ಮತ್ತಿತರರು ಪೊಲೀಸರಿಗೆ ದೂರು ನೀಡಿದ್ದಾರೆ.

ಗ್ರಾಮದ ದಲಿತರ ನೀಡುವ ಹಾಲನ್ನು ಸ್ವೀಕರಸದೆ ಇರುವ ಬಗ್ಗೆ ಕಳೆದ ಹಲವು ತಿಂಗಳುಗಳಿಂದ ನ್ಯಾಯ ಪಂಚಾಯಿತಿ ನಡೆದರೂ ಸಹ ಎರಡು ಗುಂಪುಗಳು ನಡುವಿನ ಭಿನ್ನಾಭಿಪ್ರಾಯದಿಂದ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ನಿರ್ಮಾಣವಾಗಿದೆ.