ಮತದಾರರ ಪಟ್ಟಿ ಲೋಪ ವಿರುದ್ಧ ಕೇಸ್ ದಾಖಲಿಸಿದ ಕೈ ಮುಖಂಡ; ಕ್ರಮ ಕೈಗೊಂಡ ರಂದೀಪ್’ಗೆ ವರ್ಗಾವಣೆ ಶಿಕ್ಷೆ?

First Published 15, Mar 2018, 1:52 PM IST
D Randeep transfer to Hassana
Highlights

ಕೃಷ್ಣರಾಜ ಕ್ಷೇತ್ರದ ಮತದಾರರ ಪಟ್ಟಿಯ ಲೋಪ ವಿರುದ್ಧ ಕೇಸ್ ದಾಖಲಿಸಿದ 24 ಗಂಟೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಅವರ ವರ್ಗಾವಣೆ ಆಗಿದೆ ಎಂದು ಮಾಜಿ ಸಚಿವ, ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ಎ.ರಾಮದಾಸ್ ಗಂಭೀರ ಆರೋಪ ಮಾಡಿದ್ದಾರೆ. 

ಮೈಸೂರು (ಮಾ. 15):  ಕೃಷ್ಣರಾಜ ಕ್ಷೇತ್ರದ ಮತದಾರರ ಪಟ್ಟಿಯ ಲೋಪ ವಿರುದ್ಧ ಕೇಸ್ ದಾಖಲಿಸಿದ 24 ಗಂಟೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಅವರ ವರ್ಗಾವಣೆ ಆಗಿದೆ ಎಂದು ಮಾಜಿ ಸಚಿವ, ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ಎ.ರಾಮದಾಸ್ ಗಂಭೀರ ಆರೋಪ ಮಾಡಿದ್ದಾರೆ. 

ಕೃಷ್ಣರಾಜ ಕ್ಷೇತ್ರದ ಮತದಾರರ ಪಟ್ಟಿಗೆ ಕಾಂಗ್ರೆಸ್ ಕಚೇರಿಯಲ್ಲಿ ಕುಳಿತುಕೊಂಡು ಒಬ್ಬನೇ ವ್ಯಕ್ತಿ 11 ಸಾವಿರ ಅರ್ಜಿ ಭರ್ತಿ ಮಾಡಿದ್ದಾನೆ. ಈ ಬಗ್ಗೆ ನಾನು ದೂರು ನೀಡಿದ್ದೆ. ರಂದೀಪ್ ಅವರು ಸರಸ್ವತಿಪುರಂ ಠಾಣೆಯಲ್ಲಿ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಿದ್ದರು. ರಾಜ್ಯ ಸರ್ಕಾರ ಇದನ್ನು ತಡೆಯುವ ಯತ್ನ ನಡೆಸಿತ್ತು. ಕೃಷ್ಣರಾಜ ಮಾತ್ರವಲ್ಲ, ಚಾಮುಂಡೇಶ್ವರಿ, ಚಾಮರಾಜ ಸೇರಿದಂತೆ ಕೆಲ ಕ್ಷೇತ್ರಗಳ ಚುನಾವಣಾ ಅಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಇದೇ ಕಾರಣಕ್ಕಾಗಿ ಡಿ.ರಂದೀಪ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಆರೋಪ ಮಾಡಿದ್ದಾರೆ. 

loader