ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಬೆಂಗಳೂರಿಗೆ ಸಂಜೆ ಆಗಮಿಸಿದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಭೇಟಿ ಮಾಡಿ ಸಿದ್ದರಾಮಯ್ಯ ವರ್ತನೆ ವಿರುದ್ಧ ದೂರಿದ್ದಾರೆ.
ಬೆಂಗಳೂರು (ಅ.02): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಬೆಂಗಳೂರಿಗೆ ಸಂಜೆ ಆಗಮಿಸಿದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಭೇಟಿ ಮಾಡಿ ಸಿದ್ದರಾಮಯ್ಯ ವರ್ತನೆ ವಿರುದ್ಧ ದೂರಿದ್ದಾರೆ.
ನಗರಕ್ಕೆ ಆಗಮಿಸಿದ ವೇಣುಗೋಪಾಲರನ್ನು ಕೆಕೆ ಗೇಸ್ಟೌಸ್ ನಲ್ಲಿ ಭೇಟಿ ಮಾಡಿದ ಪರಮೇಶ್ವರ್ ಮತ್ತು ಶಿವಕುಮಾರ್, ಸಿಎಂಗೆ ಬುದ್ದಿವಾದ ಹೇಳುವಂತೆ ಮನವಿ ಮಾಡಿದ್ದಾರೆ. ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿ ಘೋಷಣೆ ಮಾಡೋ ಸಂಪ್ರದಾಯ ಕಾಂಗ್ರೆಸ್ ನಲ್ಲಿಲ್ಲ. ಆದ್ರೆ ಸಿಎಂ ಹೋದಲ್ಲಿ, ಬಂದಲ್ಲಿ ಮುಂದಿನ ಸಿಎಂ ನಾನೇ ಅಂತಾ ಹೇಳೋ ಮೂಲಕ ಪಕ್ಷ ಕಾಪಾಡಿಕೊಂಡು ಬಂದಿರುವ ಸಂಪ್ರದಾಯವನ್ನ ಮುರಿಯುತ್ತಿದ್ದಾರೆ. ಚುನಾವಣೆಗೂ ಮುನ್ನ ಹೀಗೆ ಹೇಳಿಕೊಂಡು ಓಡಾಡೋದು ಎಷ್ಟು ಸರಿ ? ಪಕ್ಷ ಇಬ್ಭಾಗವಾಗೋದನ್ನ ಕೂಡಲೇ ತಡೆಯಿರಿ ಅಂತಾ ಹೇಳಿದ್ದಾರೆ. ಇದಕ್ಕೆ ರಿಯಾಕ್ಟ್ ಮಾಡಿದ ವೇಣುಗೋಪಾಲ, ಕೂಲಾಗಿರಿ, ಸಿದ್ದರಾಮಯ್ಯಗೆ ನಾನೇಲ್ಲ ಹೇಳ್ತೇನೆ. ಅನ್ನೋ ಮೂಲಕ ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ. ಡಿಕೆ ಶಿವಕುಮಾರ್ ಮತ್ತು ಪರಮೇಶ್ವರ್ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
