ಸಚಿವ ಡಿ.ಕೆ.ಶಿವಕುಮಾರ್ ಮತ್ತವರ ತಂಡವು ಹಣ ಸಾಗಣೆಗಾಗಿ ಕೋಡ್‌ವರ್ಡ್ ಬಳಕೆ ಮಾಡಿದೆ ಎಂದೂ ಐಟಿ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಒಂದು ಲಕ್ಷ ರು.ಗೆ ಒಂದು ಕೇಜಿ ಎಂಬ ಪದ ಪ್ರಯೋಗ ಮಾಡಲಾ ಗುತ್ತಿತ್ತು. ಹಣ ಸಾಗಣೆಗಾಗಿ ರುಪಾಯಿ ಪದ ಬಳಕೆ ಮಾಡುತ್ತಿರಲಿಲ್ಲ.  

ಬೆಂಗಳೂರು : ಸಚಿವ ಡಿ.ಕೆ.ಶಿವಕುಮಾರ್ ಮತ್ತವರ ತಂಡವು ಹಣ ಸಾಗಣೆಗಾಗಿ ಕೋಡ್‌ವರ್ಡ್ ಬಳಕೆ ಮಾಡಿದೆ ಎಂದೂ ಐಟಿ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಒಂದು ಲಕ್ಷ ರು.ಗೆ ಒಂದು ಕೇಜಿ ಎಂಬ ಪದ ಪ್ರಯೋಗ ಮಾಡಲಾ ಗುತ್ತಿತ್ತು. ಹಣ ಸಾಗಣೆಗಾಗಿ ರುಪಾಯಿ ಪದ ಬಳಕೆ ಮಾಡುತ್ತಿರಲಿಲ್ಲ. 

ಬದಲಿಗೆ ಕೇಜಿ ಕೋಡ್‌ವರ್ಡ್‌ನಲ್ಲಿ ಹಣದ ಸಾಗಣೆ ಮಾಡಲಾಗುತ್ತಿತ್ತು ಎಂದು ಐಟಿ ಅಧಿಕಾರಿಗಳಿಗೆ ರಾಜೇಂದ್ರ ಹೇಳಿಕೆ ನೀಡಿದ್ದಾರೆ. ಆದರೆ, ಸುನೀಲ್ ಕುಮಾರ್ ಶರ್ಮಾ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಸರಕು ಸಾಗಣೆಗಳ ಬಳಕೆಗಾಗಿ ಕೇಜಿ ಪದ ಬಳಕೆ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಇತರರನ್ನು ವಿಚಾರಣೆ ನಡೆಸಿದಾಗ ಕೇಜಿ ಕೋಡ್‌ವರ್ಡ್ ಹಣಕ್ಕಾಗಿ ಬಳಕೆಯಾಗುತ್ತಿರುವುದು ಖಚಿತ ಎಂಬ ಮಾಹಿತಿ ಲಭ್ಯವಾಗಿದೆ ಎಂದು ದೂರಿನಲ್ಲಿ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಹವಾಲ ಮೂಲಕ ಹಣ

ಆರೋಪಿ ಸುನೀಲ್ ಕುಮಾರ್ ಶರ್ಮಾ ಅವರನ್ನು ವಿಚಾರಣೆಗೊಳಪಡಿಸಿದಾಗ ಸಚಿವ ಡಿ.ಕೆ.ಶಿವಕುಮಾರ್ ತಂಡವು ಹವಾಲಾ ದಂಧೆಯಲ್ಲಿ ತೊಡಗಿರುವುದು ಸಹ ಬೆಳಕಿಗೆ ಬಂದಿದೆ. ಹಣ ಸಾಗಣೆಯಲ್ಲಿ ಈ ದಂಧೆಯು ಪ್ರಮುಖ ಪಾತ್ರವಹಿಸುತ್ತಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ