ಚಿಂತಾಮಣಿ(ಡಿ.26):  ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಬಳಿ ಅಗ್ನಿ ದುರಂತ ಸಂಭವಿಸಿದೆ.  ಗೋದಾಮಿ'ನಲ್ಲಿ   ಗ್ಯಾಸ್ ಸಿಲಿಂಡರ್ ಗಳು ತುಂಬಿದ ಲಾರಿಗಳಿಗೆ ಬೆಂಕಿ ತಗುಲಿದೆ. ಪರಿಣಾಮ ಲಾರಿಯಲ್ಲಿದ್ದ  2 ಸಾವಿರಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಸ್ಫೋಟದ ರಭಸಕ್ಕೆ 3 ಲಾರಿಗಳು ಧಗಧಗನೆ ಹೊತ್ತಿ ಉರಿದಿವೆ. ಪಟಾಕಿಗಳಂತೆ ಸುಮಾರು 2 ಗಂಟೆಗಳ ಕಾಲ ಸಿಲಿಂಡರ್‌ಗಳು ಸ್ಫೋಟಗೊಂಡಿವೆ.  ಸಿಲಿಂಡರ್ ಸ್ಫೋಟದ ಶಬ್ದ ಕೇಳಿ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.  ಸಂಸದ ಕೆ.ಎಚ್ ಮುನಿಯಪ್ಪ ಸಂಬಂಧಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಹೆಚ್'ಪಿ ಗೋಡಾನ್ ಇದಾಗಿದೆ.  ಇನ್ನೂ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.