ಭಾರೀ ಬಿರುಗಾಳಿ ಹಾಗೂ ಮಳೆಯಿಂದ ಅನೇಕ ಮನೆಗಳಿಗೆ ಹಾನಿಯುಂಟಾಗಿದ್ದು, ತೆಂಗಿನ ಮರಗಳು ಧರೆಗೆ ಉರುಳಿವೆ. ಅಲ್ಲದೇ ಐದು ಮೀನುಗಾರಿಕಾ ಬೋಟ್’ಗಳು ಸಂಪೂರ್ಣ ಹಾನಿಗೊಳಗಾಗಿವೆ. ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಸಾರಿಗೆ – ಸಂಪರ್ಕಕ್ಕೂ ಕೂಡ ಸಮಸ್ಯೆ ಎದುರಾಗಿದೆ.
ಲಕ್ಷದ್ವೀಪ(ಡಿ.2) : ಇತ್ತ ತಮಿಳುನಾಡು ಹಾಗೂ ಕೇರಳದಲ್ಲಿ ಅಬ್ಬರಿಸುತ್ತಿರುವ ಓಖಿ ಇದೀಗ ಲಕ್ಷದ್ವೀಪದತ್ತಲೂ ಮುಖ ಮಾಡಿದೆ.
ಭಾರೀ ಬಿರುಗಾಳಿ ಹಾಗೂ ಮಳೆಯಿಂದ ಅನೇಕ ಮನೆಗಳಿಗೆ ಹಾನಿಯುಂಟಾಗಿದ್ದು, ತೆಂಗಿನ ಮರಗಳು ಧರೆಗೆ ಉರುಳಿವೆ. ಅಲ್ಲದೇ ಐದು ಮೀನುಗಾರಿಕಾ ಬೋಟ್’ಗಳು ಸಂಪೂರ್ಣ ಹಾನಿಗೊಳಗಾಗಿವೆ. ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಸಾರಿಗೆ – ಸಂಪರ್ಕಕ್ಕೂ ಕೂಡ ಸಮಸ್ಯೆ ಎದುರಾಗಿದೆ.
ಗಾಳಿಯ ವೇಗ 100ರಿಂದ 110 ಕಿ.ಮೀಟರ್’ಗಳಷ್ಟು ಇದ್ದು, ಕಳೆದ 24 ಗಂಟೆಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ.
ಕಲ್ಪೇನಿ ದ್ವೀಪ ಪ್ರದೇಶದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. 130 ರಿಂದ 145 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.