ಹಲವೆಡೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಮಿಕುನು ಚಂಡಮಾರುತ ಎಫೆಕ್ಟ್  ರಾಜ್ಯದ ಕರಾವಳಿಯಲ್ಲಿಯೂ ತಟ್ಟಿದೆ. ಉಡುಪಿ ಜಿಲ್ಲೆಯಾದ್ಯಂತ ಬಿರುಗಾಳಿ ಅಬ್ಬರ ಹೆಚ್ಚಿದೆ. 

ಉಡುಪಿ : ಹಲವೆಡೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಮಿಕುನು ಚಂಡಮಾರುತ ಎಫೆಕ್ಟ್ ರಾಜ್ಯದ ಕರಾವಳಿಯಲ್ಲಿಯೂ ತಟ್ಟಿದೆ. ಉಡುಪಿ ಜಿಲ್ಲೆಯಾದ್ಯಂತ ಬಿರುಗಾಳಿ ಅಬ್ಬರ ಹೆಚ್ಚಿದೆ. 

ಕಾಪು, ಪಡುಕೆರೆ, ಮಲ್ಪೆ ಬೀಚ್ ಗಳಲ್ಲಿ ಅಲೆಗಳ ತೀವ್ರತೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದ್ದು, ಮೀನುಗಾರಿಕೆಗೆ ತೆರಳದೆ ಮೀನುಗಾರರು ತಮ್ಮ ಬೋಟ್ ಗಳೊಂದಿಗೆ ಹಿಂತಿರುಗಿದ್ದಾರೆ. 

ಸುಮಾರು 500 ಮೀಟರ್ ದೂರದಿಂದಲೇ ಅಲೆಗಳು ಏರಿ ಬರುತ್ತಿದ್ದು, ಭಾರೀ ಪ್ರಮಾಣದಲ್ಲಿ ಮೋಡ ಕವಿದ ವಾತಾವರಣವಿದೆ.

ಈಗಾಗಲೇ ಯೆಮನ್ ದೇಶಕ್ಕೆ ಮಿಕುನು ಅಪ್ಪಳಿಸಿದ್ದು, ಚಂಡಮಾರುತದ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ.

ಅಬ್ಬರಿಸಲು ಸಜ್ಜಾಗಿದೆ ಮತ್ತೊಂದು ಚಂಡಮಾರುತ