ಕರ್ನಾಟಕ ಸೇರಿದಂತೆ ಸುತ್ತಲಿನ ರಾಜ್ಯಗಳು ಮತ್ತೊಂದು ನಿಸರ್ಗದ ವಿಕೋಪ ಎದುರಿಸಲು ಸಿದ್ಧವಾಗಬೇಕಿದೆ.  ಗಜ ಹೆಸರಿನ ಚಂಡಮಾರುತ ತನ್ನ ಆರ್ಭಟ ತೋರಿಸಲು ಆಗಮಿಸುತ್ತಿದೆ.

ನವದೆಹಲಿ[ನ.11] ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಗಜ ಚಂಡಮಾರುತ 24 ಗಂಟೆಗಳಲ್ಲಿ ಹೆಚ್ಚಿಸಿಕೊಂಡು ಆಂಧ್ರಪ್ರದೇಶ ಮತ್ತು ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಮುಂಜಾಗೃತಾ ಕ್ರಮತೆಗೆದುಕೊಳ್ಳುವಂತೆಯೂ ಸೂಚನೆ ನೀಡಿದೆ. 

ಚಂಡಮಾರುತವು ಪಶ್ಚಿಮ-ನೈಋತ್ಯ ದಿಕ್ಕಿಗೆ ಸಾಗುತ್ತಿರುವಾಗ ಕಡಲೂರು (ತಮಿಳುನಾಡು) ಮತ್ತು ಶ್ರೀಹರಿಕೋಟಾ ನಡುವೆ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರ ಪ್ರದೇಶದ ಕರಾವಳಿಯಲ್ಲಿ ಇದು ಕ್ರಮೇಣವಾಗಿ ಚಂಡಮಾರುತವು ದುರ್ಬಲಗೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಮಳೆ ಮಾರುತ ಗಂಟೆಗೆ 12 ಕಿ.ಮೀ. ವೇಗದಲ್ಲಿ ಪಶ್ಚಿಮ ಮತ್ತು ವಾಯವ್ಯ ದಿಕ್ಕಿನತ್ತ ಸಾಗುತ್ತಿತ್ತು. ಆದರೆ ಈಗ ಪ್ರಬಲ ಚಂಡಮಾರುತವಾಗಿ ಮಾರ್ಪಟ್ಟಿವೆ. ಗಜ ಎಂಬ ಹೆಸರಿನ ಚಂಡಮಾರುತ ಈಗ ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರೀಯ ಭಾಗದಲ್ಲಿ ಕೇಂದ್ರೀಕೃತವಾಗಿದೆ.

ಇನ್ನು 24 ಗಂಟೆಗಳಲ್ಲಿ ಗಜ ಮತ್ತಷ್ಟು ಶಕ್ತಿ ವೃದ್ಧಿಸಿಕೊಳ್ಳಲಿದ್ದು, ಮುಂದಿನ 48 ಗಂಟೆಗಳಲ್ಲಿ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರ ಪ್ರದೇಶದ ಕರಾವಳಿ ಪ್ರದೇಶದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯಿಂದ ಸಮುದ್ರಕ್ಕೆ ಇಳಿಯದಂತೆ ತಮಿಳುನಾಡು ಮತ್ತು ಆಂಧ್ರದ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಕರ್ನಾಟಕದಲ್ಲಿ ಮಳೆ: ರಾಜ್ಯದಲ್ಲಿ ಚಳಿ ಮತ್ತು ಒಣ ಹವೆ ಮುಂದುವರಿದಿದೆ. ಆದರೆ ಗಜ ಚಂಡಮಾರುತದ ಪ್ರಭಾವದಿಂದ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ನ.15, 16ರಂದು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲೂ ಮೂರು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.


Scroll to load tweet…