ಭುವನೇಶ್ವರ[ಮೇ.04]: ಒಡಿಶಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿಡುವ ಫನಿ ಚಂಡಮಾರುತ ಪಶ್ಚಿಮ ಬಂಗಾಳಕ್ಕೆ ಲಗ್ಗೆ ಇಟ್ಟಿದೆ. ಪ್ರಚಂಡ ಮಾರುತಕ್ಕೆ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಫನಿಯ ಆಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ ವರುಣನ ಆರ್ಭಟವೂ ಜೋರಾಗಿದೆ. ಇದರಿಂದಾಗಿ ಪೂರ್ವ ಮಿದ್ನಾಪುರ ಜಿಲ್ಲೆಯಲ್ಲಿ 50 ಮನೆಗಳು ನಾಶಗೊಂಡಿವೆ. 

ಒಡಿಶಾದಲ್ಲಿ ಫನಿ ಚಂಡಮಾರುತ ಯಾವ ರೀತಿ ಆತಂಕ ಸೃಷ್ಟಿಸಿದೆ ಎಂಬುವುದಕ್ಕೆ ವಿಡಿಯೋ ಒಂದು ಸಾಕ್ಷಿಯಾಗಿದೆ. ಗಂಟೆಗೆ 200 ಕಿ. ಮೀಟರ್ ವೇಗದಲ್ಲಿ ಬೀಸುತ್ತಿದ್ದ ಗಾಳಿಗೆ 250 ಅಡಿ ಎತ್ತರದ ಕ್ರೇನ್ ಕೂಡಾ ಮುಗ್ಗರಿಸಿದೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ನಿಲ್ಲಿಸಲಾಗಿದ್ದ ಕ್ರೇನ್ ಗಾಳಿಯ ರಭಸಕ್ಕೆ ನಿಲ್ಲಲಾಗದೆ, ಪಕ್ಕದಲ್ಲಿದ್ದ ಅಂಗಡಿಗಳ ಮೇಲೆ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು.