ಸೈಕಲ್ ಸವಾರನಿಗೆ ಬಸ್​ ಡಿಕ್ಕಿ ಹೊಡೆದ ಪರಿಣಾಮವಾಗಿ ಸೈಕಲ್ ಸವಾರ ಮೃತಪಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ನಗರದ ಬಿಇಓ ಕಚೇರಿ ಬಳಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ದುರಂತ ನಡೆದಿದೆ.

ಕೊಪ್ಪಳ (ಫೆ.01): ಸೈಕಲ್ ಸವಾರನಿಗೆ ಬಸ್​ ಡಿಕ್ಕಿ ಹೊಡೆದ ಪರಿಣಾಮವಾಗಿ ಸೈಕಲ್ ಸವಾರ ಮೃತಪಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ನಗರದ ಬಿಇಓ ಕಚೇರಿ ಬಳಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ದುರಂತ ನಡೆದಿದೆ.

ಬೆಳಿಗ್ಗೆ 9 ಗಂಟೆ ಸುಮಾರಿಗೆ ದೇವರಾಜ ಅರಸ್​ ಕಾಲೋನಿಯ ಸೈಕಲ್ ಸವಾರ 17 ವರ್ಷದ ಅನ್ವರ್ ಬರುತ್ತಿದ್ದ ವೇಳೆಯಲ್ಲಿ ಬಸ್​ ಈತನಿಗೆ ಡಿಕ್ಕಿ ಹೊಡೆದು, ಈತನ ಸೊಂಟದ ಮೇಲೆ ಬಸ್​ ಹಾದು ಹೋಗಿದೆ. ಆಗ ಅನ್ವರ್​​​ನ ಸೊಂಟದ ಭಾಗದಲ್ಲಿ ತೀವ್ರ ರಕ್ತಸ್ರಾವ ಆಗಲು ಪ್ರಾರಂಭವಾಗಿದೆ. ನೋವಿನಿಂದ ಅನ್ವರ್​​ ರಸ್ತೆ ಮದ್ಯೆ ಬಿದ್ದು ಒದ್ದಾಡುತ್ತಿದ್ದ. ಕೂಡಲೇ ಆತನ ನೆರವಿಗೆ ಬಂದ ಸ್ಥಳಿಯರು ಆತನಿಗೆ ನೀರು ಕುಡಿಸಿದ್ದಾರೆ. ಜೊತೆಗೆ 108 ಅಂಬ್ಯುಲೇನ್ಸ್​ಗೆ ಫೋನ್ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನ್ವರ್​ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾನೆ. ಇನ್ನು ಅನ್ವರ್​ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದದ್ದು ಎಂತವರ ಮನಸ್ಸನ್ನು ಕಲಕುವಂತಿತ್ತು. ಇನ್ನು ಘಟನೆ ಕುರಿತು ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.