"ಎಡರಂಗ ಅಧಿಕಾರಕ್ಕೆ ಬಂದಾಗೆಲ್ಲಾ ಕೇರಳದಲ್ಲಿ ಹಿಂಸಾಚಾರಗಳು ಆರಂಭವಾಗುತ್ತವೆ. ಆ ರಾಜ್ಯದಲ್ಲಿ 120ಕ್ಕೂ ಹೆಚ್ಚು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದೆ. ಮುಖ್ಯಮಂತ್ರಿ ಪಿನಾರಯಿ ವಿಜಯನ್ ಅವರ ಕ್ಷೇತ್ರವೊಂದರಲ್ಲೇ 80ಕ್ಕೂ ಹೆಚ್ಚು ಕೊಲೆಯಾಗಿದೆ. ಇದಕ್ಕೆ ಸಿಎಂ ಉತ್ತರ ನೀಡಬೇಕಿದೆ," ಎಂದು ಅಮಿತ್ ಶಾ ಆಗ್ರಹಿಸಿದ್ದಾರೆ.
ಕಣ್ಣೂರು(ಅ. 03): ದೇಶದಲ್ಲಿ ಎಡರಂಗ ಆಡಳಿತದ ರಾಜ್ಯಗಳಲ್ಲಿ ರಾಜಕೀಯ ಹತ್ಯೆಗಳು ಸಾಮಾನ್ಯವಾಗಿರುತ್ತವೆ. ಎಡಪಕ್ಷ ಸರಕಾರ ಅಸ್ತಿತ್ವದಲ್ಲಿರುವ ಕೇರಳ ಮತ್ತು ತ್ರಿಪುರಾಗಳಲ್ಲಿ ನಡೆಯುತ್ತಿರುವ ಸರಣಿ ಹಿಂಸಾಚಾರಗಳು ಇದಕ್ಕೆ ಸಾಕ್ಷಿ ಎಂದು ಅಮಿತ್ ಶಾ ಹೇಳಿದ್ದಾರೆ.
"ಎಡರಂಗ ಅಧಿಕಾರಕ್ಕೆ ಬಂದಾಗೆಲ್ಲಾ ಕೇರಳದಲ್ಲಿ ಹಿಂಸಾಚಾರಗಳು ಆರಂಭವಾಗುತ್ತವೆ. ಆ ರಾಜ್ಯದಲ್ಲಿ 120ಕ್ಕೂ ಹೆಚ್ಚು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದೆ. ಮುಖ್ಯಮಂತ್ರಿ ಪಿನಾರಯಿ ವಿಜಯನ್ ಅವರ ಕ್ಷೇತ್ರವೊಂದರಲ್ಲೇ 80ಕ್ಕೂ ಹೆಚ್ಚು ಕೊಲೆಯಾಗಿದೆ. ಇದಕ್ಕೆ ಸಿಎಂ ಉತ್ತರ ನೀಡಬೇಕಿದೆ," ಎಂದು ಅಮಿತ್ ಶಾ ಆಗ್ರಹಿಸಿದ್ದಾರೆ.
ಕೇರಳದಲ್ಲಿ ರಾಜಕೀಯ ಹತ್ಯೆಗಳಾಗುತ್ತಿದ್ದರೂ ಮಾನವ ಹಕ್ಕು ಸಂಘಟನೆಗಳು ಯಾಕೆ ತುಟಿ ಪಿಟಕ್ ಎನ್ನುತ್ತಿಲ್ಲ ಎಂದೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಪ್ರಶ್ನಿಸಿದ್ದಾರೆ.
ಇಲ್ಲಿಗೆ ಸಮೀಪದ ತಳಿಪರಂಬದಲ್ಲಿನ ರಾಜರಾಜೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ, ಬಳಿಕ ಪಯ್ಯನ್ನೂರ್'ನಲ್ಲಿ ಬಿಜೆಪಿಯ ಜನರಕ್ಷಾ ಯಾತ್ರೆಯ ಉದ್ಘಾಟನೆ ಮಾಡಿದ್ದಾರೆ. ಈ ಯಾತ್ರೆಯು ಕೇರಳಾದ್ಯಂತ ಸಾಗಿ ಅ.17ರಂದು ರಾಜಧಾನಿ ತಿರುವನಂತಪುರಂನಲ್ಲಿ ಮುಕ್ತಾಯವಾಗುತ್ತದೆ.