ಮುಂಬೈ(ಮಾ.22): ಬ್ಯಾಂಕುಗಳು ಡೆಬಿಟ್ ಕಾರ್ಡ್'ನಲ್ಲಿ ಅನಗತ್ಯ ಶುಲ್ಕವನ್ನು ವಿಧಿಸುತ್ತಿರುವುದರಿಂದ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.

ತಮ್ಮ ಬ್ಯಾಂಕಿನಲ್ಲಿ ಕನಿಷ್ಠ ಬಾಕಿ ಇಲ್ಲದಿದ್ದರೆ ಪ್ರತಿಬಾರಿಯು 17ರೂ.ಗಳಿಂದ 25 ರೂ.ಗಳವರೆಗೂ ಶುಲ್ಕವನ್ನು ತೆರಬೇಕಾಗಿದೆ. ಇದರಲ್ಲಿ  ಜಿಎಸ್'ಟಿ ದರವು ಅನ್ವಯಗೊಳ್ಳುತ್ತದೆ. ಎಟಿಎಂ ಮಷಿನ್'ಗಳಲ್ಲಿ ಎಸ್'ಬಿಐ'ನಿಂದ ಪ್ರತಿ ಬಾರಿ 17 ರೂ. ಶುಲ್ಕ ಕಡಿತವಾದರೆ ಹೆಚ್'ಡಿಎಫ್'ಸಿ ಹಾಗೂ ಐಸಿಐಸಿಐ ಬ್ಯಾಂಕ್'ನಿಂದ 25 ರೂ. ಕಡಿತವಾಗುತ್ತಿದೆ. ಇನ್ನು ಹಲವು ಬ್ಯಾಂಕ್'ಗಳಲ್ಲಿ ಈ ರೀತಿಯ ಶುಲ್ಕಗಳನ್ನು ವಿಧಿಸಲಾಗುತ್ತಿದೆ.     

ಇಂಟರ್'ನೆಟ್ ವ್ಯವಹಾರ ತಿಳಿದವರಿಗೆ ಇದರ ಬಗ್ಗೆ ಗೊತ್ತಾಗುತ್ತಿದೆ. ಒಂದಂಕಿಯ ಹಣವಾದ್ದರಿಂದ ಬಹುತೇಕರು ಇದರ ಬಗ್ಗೆ ಗೊತ್ತಾಗುವುದೇ ಇಲ್ಲ. ಕೇಂದ್ರ ಸರ್ಕಾರ 2 ವರ್ಷಗಳ ಹಿಂದಷ್ಟೆ ಸಾವಿರ ಹಾಗೂ 500 ರೂ. ಅಪಮೌಲ್ಯಿಕರಿಸಿತ್ತು. ಆ ದಿನಗಳಲ್ಲಿ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು. ಕೆಲ ತಿಂಗಳು ಯಾವುದೇ ವ್ಯವಹಾರಕ್ಕೆ ಕಾರ್ಡ್ ಸ್ವೈಪ್ ಮಾಡಿದರೆ ಶುಲ್ಕ ಪಾವತಿಸಲಾಗುತ್ತಿರಲಿಲ್ಲ.

ಭ್ರಷ್ಟಚಾರ ಕಡಿಮೆಯಾಗಬೇಕಾದರೆ ಹೆಚ್ಚಾಗಿ ಡಿಜಿಟಲ್ ವ್ಯವಹಾರ ಬಳಸಿ ಎಂದು ಸಾರ್ವಜನಿಕರಿಗೆ ಕರೆ ನೀಡಿರುವ ಕೇಂದ್ರ ಸರ್ಕಾರವೆ ಹಿಂಬಾಗಿಲಿನ ಮೂಲಕ ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದೆ. ಇದರಿಂದ ಮಧ್ಯಮ ವರ್ಗದವರೆ ತೊಂದರೆ ಅನುಭವಿಸುವಂತಾಗಿದೆ' ಎಂದು ಆರ್ಥಿಕ ತಜ್ಞರು ಆಕ್ರೋಶವ್ಯಕ್ತಪಡಿಸಿದ್ದಾರೆ.