Asianet Suvarna News Asianet Suvarna News

ಮರಣೋತ್ತರ ವರದಿ ಬಗ್ಗೆ ಮೂಡಿದೆ ಭಾರೀ ಕುತೂಹಲ?

ಕಾಫಿ ಸಾಮ್ರಾಜ್ಯದ ಒಡೆಯ ಸಿದ್ಧಾರ್ಥ ಅವರು ಸಾವು ಸಂಭವಿಸಿದೆ. ಆದರೆ ಅವರ ಸಾವಿನ ಸುತ್ತ ಹಲವು ಅನುಮಾನಗಳು ಇನ್ನೂ ಇದೆ. ಇನ್ನು ಮರಣೋತ್ತರ ಪರೀಕ್ಷೆ ವರದಿ ಬರಬೇಕಿದ್ದು, ಇದರತ್ತ ಎಲ್ಲರ ಕುತೂಹಲ ನೆಟ್ಟಿದೆ.

Curiosity Rover Cafe Coffee Day owner Siddharth postmortem Report
Author
Bengaluru, First Published Aug 1, 2019, 7:44 AM IST

ಮಂಗಳೂರು [ಆ.1]:  ಹೊಯ್ಗೆ ಬಜಾರ್‌ನಲ್ಲಿ ಪತ್ತೆಯಾದ ಕಾಫಿ ಉದ್ಯಮಿ ಸಿದ್ಧಾರ್ಥ ಅವರ ಶವವನ್ನು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯ ಶವಾಗಾರದಲ್ಲಿ ಬುಧವಾರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಾವಿಗೆ ಕಾರಣವಾದ ಅಂಶಗಳು ಮರಣೋತ್ತರ ವರದಿ ವಿಶ್ಲೇಷಣೆಯಲ್ಲಿ ವರದಿ 30 ದಿನದೊಳಗೆ ಬಹಿರಂಗವಾಗಲಿದೆ.

ವೆನ್ಲಾಕ್‌ ಆಸ್ಪತ್ರೆ ಶವಾಗಾರದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೇನ್ಸಿಕ್‌ ತಜ್ಞ ಡಾ.ಪ್ರತೀಕ್‌ ರಸ್ತೋಗಿ ಹಾಗೂ ವೆನ್ಲಾಕ್‌ ಆಸ್ಪತ್ರೆಯ ಫೆäರೇನ್ಸಿಕ್‌ ತಜ್ಞೆ ಡಾ.ಕೆ.ಎಸ್‌.ರಶ್ಮಿ ಅವರು ಶವದ ಮರಣೋತ್ತರ ಪರೀಕ್ಷೆ ನಡೆಸಿದರು. ಸುಮಾರು 2 ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಸಾಮಾನ್ಯವಾಗಿ ಆತ್ಮಹತ್ಯೆಯಂತಹ ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದು ಕಡಿಮೆ. ಆದರೆ ಸಿದ್ಧಾರ್ಥರ ಮೇಲೆ ಐಟಿ ದಾಳಿ, ಅಧಿಕಾರಿಗಳ ಒತ್ತಡದ ಆರೋಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮರಣೋತ್ತರ ಪರೀಕ್ಷೆ ವರದಿ ಸಲ್ಲಿಕೆಗೆ 30 ದಿನಗಳ ಅವಧಿ ಇರುತ್ತದೆ. ಇದು ವಿಶೇಷ ಪ್ರಕರಣವಾದ ಹಿನ್ನೆಲೆಯಲ್ಲಿ ಆದಷ್ಟುಶೀಘ್ರ ಮರಣೋತ್ತರ ವರದಿಯನ್ನು ವೆನ್ಲಾಕ್‌ ಆಸ್ಪತ್ರೆ ಅಧೀಕ್ಷಕರಿಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಮರಣೋತ್ತರ ಪರೀಕ್ಷೆ ವೇಳೆ ಅಲ್ಲಿದ್ದವರು ಈ ಸಾವು ಹೇಗೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಫೊರೇನ್ಸಿಕ್‌ ತಜ್ಞರನ್ನು ಪ್ರಶ್ನಿಸಿದ್ದರು. ಆದರೆ, ನಿಯಮ ಪ್ರಕಾರ ಅಂತಹ ಯಾವುದೇ ಮಾಹಿತಿಯನ್ನು ತಜ್ಞರು ಬಹಿರಂಗವಾಗಿ ನೀಡುವಂತಿಲ್ಲ. ಹಾಗಾಗಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ನೀಡುವುದಾಗಿ ತಜ್ಞರು ಉತ್ತರಿಸಿದರು ಎಂದು ಹೇಳಲಾಗಿದೆ.

ಸಿದ್ಧಾರ್ಥರ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶವದ ಹಣೆಯಲ್ಲಿ ಕಂಡುಬಂದಿರುವ ಗಾಯದ ಗುರುತು ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸ್ಪಷ್ಟವಾಗಲಿದೆ. ಈ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ.

- ಡಾ.ರಾಜೇಶ್ವರಿ ದೇವಿ, ಹಿರಿಯ ಅಧೀಕ್ಷಕಿ, ವೆನ್ಲಾಕ್‌ ಆಸ್ಪತ್ರೆ

Follow Us:
Download App:
  • android
  • ios