ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಪುಡಿಪುಡಿ ಮಾಡಿ ದುಷ್ಕರ್ಮಿಗಳು  ಅಟ್ಟಹಾಸ ಮೆರೆದಿದ್ದಾರೆ.

ಬೆಂಗಳೂರು (ಅ.15): ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಪುಡಿಪುಡಿ ಮಾಡಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.

ನಾಗೇಂದ್ರ ಬ್ಲಾಕ್​ನ 11ನೇ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಮುಂದೆ ನಿಲ್ಲಿಸಿದ್ದ 15 ಕ್ಕೂ ಹೆಚ್ಚು ಕಾರುಗಳ ಗಾಜನ್ನು ಒಡೆದಿದ್ದಾರೆ. ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ. ನಿನ್ನೆ ಗಿರಿನಗರದ 10 ಕಡೆಗಳಲ್ಲಿ ಇದೇ ದುಷ್ಕತ್ಯ ನಡೆಸಿದ್ದರು. ಗಿರಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.