ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನದ ವೇಳೆ ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರ ಹದಗೆಟ್ಟಿರುವ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದರು

ಜಿ. ಪರಮೇಶ್ವರ್​ ಒಂದೋ ಗೃಹ ಸಚಿವರಾಗಿರಲಿ, ಇಲ್ಲವೇ ಕೆಪಿಸಿಸಿ ಅಧ್ಯಕ್ಷರಾಗಿರಲಿ. ಎರಡೂ ಹುದ್ದೆ ಅವರಿಂದ ನಿಭಾಯಿಸಲು ಆಗುತ್ತಿಲ್ಲ ಅಂತ ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿನೇದಿನೇ ಹದಗೆಡುತ್ತಿದೆ. ಪರಮೇಶ್ವರ್ ಗೃಹಸಚಿವರೂ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರಿವುದರಿಂದ ಅವರಿಂದ ಎರಡೂ ಹುದ್ದೆ ನಿಭಾಯಿಸಲಾಗುತ್ತಿಲ್ಲ. ಇದರ ನೇರ ಪರಿಣಾಮ ರಾಜ್ಯದ ಕಾನೂನು ಸುವ್ಯವಸ್ಥೆ ಮೇಲಾಗ್ತಿದೆ ಅಂತ ಸಿಟಿ ರವಿ ವಿಶ್ಲೇಷಿಸಿದರು. ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನದ ವೇಳೆ ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರ ಹದಗೆಟ್ಟಿರುವ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದ ಅವರು, ಪರಮೇಶ್ವರ್ ಯಾವುದಾದರೂ ಒಂದು ಹುದ್ದೆಯಲ್ಲಿ ಮುಂದುವರಿಯಲಿ ಅಂತ ಒತ್ತಾಯಿಸುವುದಾಗಿ ತಿಳಿಸಿದರು.