ಸಿದ್ದರಾಮಯ್ಯ ಕೂಡ ಭಯೋತ್ಪಾದಕ

CT Ravi Slams Siddaramaiah
Highlights

ಸತ್ಯದ ಪರ ಹೋರಾಟ ಮಾಡೋದನ್ನು ಭಯೋತ್ಪಾನೆ ಅಂತಾ ಕರೆಯೋದಕ್ಕೆ ಯಾವ ಶಬ್ದಕೋಶದಲ್ಲಿ ಓದಿಕೊಂಡಿದ್ದಾರೆ.. ಭಯೋತ್ಪಾನೆ ಅನ್ನೋದಕ್ಕೆ ಶಬ್ದಕೋಶದಲ್ಲಿ ಬೇರೆ ಅರ್ಥವಿದ್ದಲ್ಲಿ ದನ್ನ ರಾಮಲಿಂಗರೆಡ್ಡಿ ಹಾಗೂ ಸಂಧಿ ಸಮಾಸ ಬಗ್ಗೆ ಮಾತಾಡೋ ಸಿಎಂ ಕೂಡ ಓದಿಕೊಳ್ಳಲಿ'

ಚಿಕ್ಕಮಗಳೂರು(ಜ.12) : ಭಯೋತ್ಪಾದನೆ ರೀತಿ ಮಾತಾನಾಡುವುದೇ ಭಯೋತ್ಪಾದನೆ ಅಂದ್ರೆ ಸಿದ್ದರಾಮಯ್ಯ ಕೂಡ ಒಬ್ಬ ಭಯೋತ್ಪಾದಕರಾಗುತ್ತಾರೆ ಸಿಎಂ ಅವರ ಮಾತಿನಲ್ಲಿ ಬೆದರಿಕೆ ಇದೆ, ದಾಸ್ಯ ಇದೆ, ದುರಹಂಕಾರ ಇದೆ. ನಾವು ಯಾವತ್ತು ದುರಹಂಕಾರದ ಮಾತು ಆಗಲಿ, ಬೆದರಿಕೆ ರೀತಿ ಮಾತಾನಾಡಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆಗೆ ಶಾಸಕ ಸಿ.ಟಿ. ತಿರುಗೇಟು ನಿಡಿದರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು,  ನಾವು ಸತ್ಯದ ಪರ ಹೋರಾಟ ಮಾಡೋದನ್ನ ಭಯೋತ್ಪಾದನೆ ಅಂದ್ರೆ ಹೇಗೆ. ಸತ್ಯದ ಪರ ಹೋರಾಟ ಮಾಡೋದನ್ನು ಭಯೋತ್ಪಾದನೆ ಅಂತಾ ಕರೆಯೋದಕ್ಕೆ ಯಾವ ಶಬ್ದಕೋಶದಲ್ಲಿ ಓದಿಕೊಂಡಿದ್ದಾರೆ.. ಭಯೋತ್ಪಾದನೆ ಅನ್ನೋದಕ್ಕೆ ಶಬ್ದಕೋಶದಲ್ಲಿ ಬೇರೆ ಅರ್ಥವಿದ್ದಲ್ಲಿ ಅದನ್ನ ರಾಮಲಿಂಗರೆಡ್ಡಿ ಹಾಗೂ ಸಂಧಿ ಸಮಾಸ ಬಗ್ಗೆ ಮಾತಾಡೋ ಸಿಎಂ ಕೂಡ ಓದಿಕೊಳ್ಳಲಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ತಾಲಿಬಾಲ್ ಹಾಗೂ ನಕ್ಸಲ್ ಜೊತೆ ನಂಟು ಇಟ್ಟುಕೊಂಡು ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಹಿಂದೂ ಯಾವತ್ತು ಉಗ್ರ ಆಗುವುದಕ್ಕೆ ಸಾಧ್ಯವಿಲ್ಲ. ಹಾಗೊಮ್ಮೆ ಹೀಗೊಮ್ಮೆ ವ್ಯಾಘ್ರವಾಗಬಹುದು ಉಗ್ರರಾಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದರು.

loader