ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು ಮತದಾರರನ್ನು ಸೆಳೆಯಲು ಒಂದಲ್ಲ ರೀತಿಯಲ್ಲಿ ಪ್ರಯತ್ನ ನಡೆಸ್ತಾರೆ. ಅದೇ ರೀತಿ ಬಿಜೆಪಿ ಶಾಸಕ ಸಿ.ಟಿ.ರವಿ ಚುನಾವಣೆಗೆ ಇನ್ನೂ 8 ತಿಂಗಳಿರುವಾಗಲೇ ಮತದಾರರನ್ನು ಸೆಳೆಯಲು ಗ್ರಾಮ ವಾಸ್ತವ್ಯದ ಮೊರೆ ಹೋಗಿದ್ದಾರೆ.
ಚಿಕ್ಕಮಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು ಮತದಾರರನ್ನು ಸೆಳೆಯಲು ಒಂದಲ್ಲ ರೀತಿಯಲ್ಲಿ ಪ್ರಯತ್ನ ನಡೆಸ್ತಾರೆ. ಅದೇ ರೀತಿ ಬಿಜೆಪಿ ಶಾಸಕ ಸಿ.ಟಿ.ರವಿ ಚುನಾವಣೆಗೆ ಇನ್ನೂ 8 ತಿಂಗಳಿರುವಾಗಲೇ ಮತದಾರರನ್ನು ಸೆಳೆಯಲು ಗ್ರಾಮ ವಾಸ್ತವ್ಯದ ಮೊರೆ ಹೋಗಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಚಿಕ್ಕಮಗಳೂರು ತಾಲೂಕಿನ ಐದಾರು ಗ್ರಾಮಗಳಲ್ಲಿ ವಾಸ್ತವ್ಯ ಮಾಡಿರೋ ಸಿ.ಟಿ.ರವಿ, ಕಳೆದ ರಾತ್ರಿ ಗಾಳಿಪೂಜೆ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ರು. ಈ ವೇಳೆ ಗ್ರಾಮದ ಜನರೊಂದಿಗೆ ಮಸ್ತ್ ಸ್ಟೆಪ್ಸ್ ಹಾಕಿ ಡಾನ್ಸ್ ಕೂಡಾ ಮಾಡಿ ಎಂಜಾಯ್ ಮಾಡಿದ್ದಾರೆ.
ಈ ವೀಡಿಯೋ ಇದೀಗ ವೈರಲ್ ಆಗಿದ್ದು, ಮೊದಲು ಸಮಸ್ಯೆ ಬಗೆಹರಿಸಿ ನಂತರ ಡ್ಯಾನ್ಸ್ ಮಾಡಿ ಅಂತ ಚಿಕ್ಕಮಗಳೂರು ಜನ, ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
