Asianet Suvarna News Asianet Suvarna News

ಸಿದ್ದರಾಮಯ್ಯ ನಾನು ಒಂದಾಗಿದ್ದೇವೆ

ಸಿದ್ದರಾಮಯ್ಯ ಸರ್ಕಾರ 5 ವರ್ಷ ಜನಪರ ಕಾರ್ಯಕ್ರಮ ನೀಡಿದೆ. ಇದನ್ನು ಜನತೆ ಮರೆತಿಲ್ಲ. ಹೀಗಾಗಿ ಈ ಉಪಚುನಾವಣೆಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳಿಂದ ಪುನಃ ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆಂಬ ವಿಶ್ವಾಸವಿದೆ

Crowds cheer as H D Deve Gowda, Siddaramaiah campaign together at Bellary
Author
Bengaluru, First Published Oct 30, 2018, 9:47 PM IST

ಕೂಡ್ಲಗಿ[ಅ.30]: ಸಿದ್ದರಾಮಯ್ಯ ಹಾಗೂ ದೇವೇಗೌಡರು ಮೊದಲು ಹೊಡೆದಾಡಿದ್ರೂ ಈಗೇನು ಒಂದೇ ವೇದಿಕೆಯಲ್ಲಿ ಸೇರಿಕೊಂಡಿದ್ದಾರೆ ಎಂದು ನೀವು ತಪ್ಪು ಭಾವಿಸಬೇಡಿ. ನನಗೆ ಪ್ರತಿಷ್ಠೆ ಇಲ್ಲ ಈ ದೇಶದ ಭವಿಷ್ಯದ ದೃಷ್ಟಿಯಿಂದ ಜೊತೆಯಾಗಿದ್ದೇವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.
ಅವರು ಕೂಡ್ಲಿಗಿ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. 

ರಾಜ್ಯದಲ್ಲಿ ನಡೆಯುವ 5 ಉಪಚುನಾವಣೆಯಲ್ಲಿ ಗೆದ್ದರೆ ಹಿಂದೂಸ್ತಾನದ ರಾಜಕಾರಣದಲ್ಲಿ ಕೇಂದ್ರದಲ್ಲಿಯೂ ಮೈತ್ರಿ ಸರ್ಕಾರ ನಡೆಯುವುದು ಶತಸಿದ್ಧ ಎಂದರು. ಸಿದ್ದರಾಮಯ್ಯ ಸರ್ಕಾರ 5 ವರ್ಷ ಜನಪರ ಕಾರ್ಯಕ್ರಮ ನೀಡಿದೆ. ಇದನ್ನು ಜನತೆ ಮರೆತಿಲ್ಲ. ಹೀಗಾಗಿ ಈ ಉಪಚುನಾವಣೆಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳಿಂದ ಪುನಃ ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆಂಬ ವಿಶ್ವಾಸವಿದೆ ಎಂದರು.

ವಾಲ್ಮೀಕಿ ಪುತ್ಥಳಿ ಬಗ್ಗೆ ಗೌಡರ ಮಾತು: ವಿಧಾನಸಭೆಯ ಮುಂದೆ ವಾಲ್ಮಿಕಿ ಪುತ್ಥಳಿ ನಿರ್ಮಿಸಲು ಸಿದ್ದರಾಮಯ್ಯ ಸರ್ಕಾರದಲ್ಲಿ ಉಗ್ರಪ್ಪ ಅವರ ಪಾತ್ರ ಮಹ್ವತವಿದೆ. ಉಗ್ರಪ್ಪ ಉತ್ತಮ ಹೋರಾಟಗಾರರಾಗಿದ್ದಾರೆ ಇಂತವರನ್ನು ಗೆಲ್ಲಿಸುವ ಮೂಲಕ ಮೈತ್ರಿ ಸರ್ಕಾರಕ್ಕೆ ಮತ್ತಷ್ಟು ಬಲ ತುಂಬಿ ಎಂದು ನೆರೆದಿದ್ದ ಕಾರ್ಯಕರ್ತರಿಗೆ ಕರೆ ನೀಡಿದರು.

Follow Us:
Download App:
  • android
  • ios