ಬೌರಿಂಗ್ ಇನ್ಸ್‌ಸ್ಟಿಟ್ಯೂಟ್ ಒಳಗೆ ಸಿಕ್ತು ಕೋಟಿ ಕೋಟಿ ಮೌಲ್ಯದ ನಿಧಿ ..!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Jul 2018, 3:28 PM IST
Crore Of Money Found In Bowring Institute
Highlights

ಬೆಂಗಳೂರಿನ ಬೌರಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಕೋಟಿ ಕೋಟಿ ಮೌಲ್ಯದ ಹಣ ಹಾಗೂ ವಜ್ರಾಭರಣಗಳು ಪತ್ತೆಯಾಗಿದೆ. ಇದು ಅನಾಧಿ ಕಾಲದಲ್ಲಿ ಇಲ್ಲಿ ಹುದುಗಿಸಿ ಇಟ್ಟ ಹಣವಲ್ಲ. ಉದ್ಯಮಿಯೋರ್ವ ಬಚ್ಚಿಟ್ಟಿದ್ದ ಕಳ್ಳ ಗಂಟು 

ಬೆಂಗಳೂರು : ಬೆಂಗಳೂರಿನ ಬೌರಿಂಗ್ ಇನ್ಸ್‌ಸ್ಟಿಟ್ಯೂಟ್ ಒಳಗೆ ಕೋಟಿ ಕೋಟಿ ಮೌಲ್ಯದ ನಿಧಿ ಪತ್ತೆಯಾಗಿದೆ. ಇದು ಅನಾಧಿ ಕಾಲದಿಂದ ಬಚ್ಚಿಟ್ಟಿದ್ದ ಹಣವಲ್ಲ. ಆದರೆ  ಮಹಾಶಯನೊಬ್ಬ ಬಚ್ಚಿಟ್ಟಿದ್ದ ಕಳ್ಳಗಂಟಾಗಿದೆ. 

ಅವಿನಾಶ್ ಅಮರ್ ಲಾಲ್ ಎಂಬ ಉದ್ಯಮಿ ಇಲ್ಲಿ ಕಳೆದ ಒಂದು ವರ್ಷದಿಂದ ಬಚ್ಚಿಟ್ಟಿದ್ದ  ಕೋಟಿ ಕೋಟಿ ನಿಧಿ ಪತ್ತೆಯಾಗಿದೆ. ಬೌರಿಂಗ್ ಇನ್ಸ್‌ಸ್ಟಿಟ್ಯೂಟ್ ಆಡಳಿತ ಮಂಡಳಿಯಿಂದ ಲಾಕರ್ ತೆರೆದಾಗ ಲಾಕರ್ ಒಳಗೆ 2 ಬ್ಯಾಗ್ ಪತ್ತೆಯಾಗಿದ್ದು, ಈ ಬ್ಯಾಗ್ ಗಳಲ್ಲಿ  9.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಪತ್ತೆಯಾಗಿದೆ. ಅಲ್ಲದೇ 100 ಕೋಟಿ ಮೌಲ್ಯದ ಆಸ್ತಿ ಪತ್ರ ಪತ್ತೆಯಾಗಿದೆ.  

ಲಾಕರ್ ಓಪನ್ ಮಾಡುತ್ತಿದ್ದಂತೆ ಗಾಬರಿಯಾಗಿ ಬೌರಿಂಗ್ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. ಆದರೆ ಈ ಹಣವನ್ನು ನೋಡಿದ ಬಳಿಕ ಪೊಲೀಸರೂ ಕೂಡ ಈ ಪ್ರಮಾಣದ ಭಾರೀ ಹಣ, ಆಭರಣ  ಪರಿಶೀಲನೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈ ಕಟ್ಟಿ ಕುಳಿತಿದ್ದಾರೆ. ಅಲ್ಲದೇ ಈ ಬಗ್ಗೆ ಐಟಿ ಇಲಾಖೆಗೆ ಮಾಹಿತಿ ನೀಡಲು ಮುಂದಾಗಿದ್ದರು. 

ಈ ವೇಳೆಯೇ ಬೌರಿಂಗ್ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ಉದ್ಯಮಿ ಹಣದ ಆಮಿಷ ಒಡ್ಡಿದ್ದು, ಹಣ, ವಜ್ರಾಭರಣ ನೀವೆ ಇಟ್ಟುಕೊಳ್ಳಿ ಆಸ್ತಿ ಪತ್ರ ಮಾತ್ರ ಕೊಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.  ಈ ಪ್ರಕರಣ ಮುಂದುವರಿಸದಂತೆ ಆಮಿಷ ಒಡ್ಡಿದ್ದು, ಆಮಿಷಕ್ಕೆ ಒಳಗಾಗದ ಬೌರಿಂಗ್ ಆಡಳಿತ ಮಂಡಳಿ  ಐಟಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದೆ. 

ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪನಿಯಲ್ಲಿ ಪಾಲುದಾರನಾಗಿದ್ದ ಅವಿನಾಶ್ ಅಮರ್‌ಲಾಲ್,  ಬೆಂಗಳೂರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಶೇಕಡ 30 ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದರು. ಅಲ್ಲದೇ  ಸಾಲ ಕೊಟ್ಟು ಆಸ್ತಿ ಪತ್ರಗಳನ್ನು ಪಡೆಯುತ್ತಿದ್ದರು ಎನ್ನುವ ವಿಚಾರ ಈ ವೇಳೆ ಬೆಳಕಿಗೆ ಬಂದಿದೆ.

loader