Asianet Suvarna News Asianet Suvarna News

ವಿವಿಧ ಕ್ಷೇತ್ರದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ

ದೇಶದಲ್ಲಿ ಸ್ಟಾರ್ಟ್ ಅಪ್ ಸೇರಿದಂತೆ ವಿವಿಧ ರಿತಿಯ ಔದ್ಯೋಗಿಕ ರಂಗಗಳಲ್ಲಿ ಒಂದು ಕೋಟಿಗೂ ಅತ್ಯಧಿಕ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಶಿವ್ ಪ್ರತಾಪ್ ಶುಕ್ಲಾ ಹೇಳಿದ್ದಾರೆ. 

Crore Of Employment Created From Union Govt Says Union Minister
Author
Bengaluru, First Published Sep 7, 2018, 8:38 AM IST

ಬೆಂಗಳೂರು :  ಸ್ಟಾರ್ಟ್ ಅಪ್ ಸೇರಿದಂತೆ ವಿವಿಧ ರಂಗಗಳಲ್ಲಿ ಒಂದು ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸಲಾ ಗಿದೆ. ಕೇಂದ್ರ ಸರ್ಕಾರವು ಉದ್ಯೋಗವೇ ಸೃಷ್ಟಿಸಿಲ್ಲ ಎಂದು ಹೇಳುವವರು ಮೊದಲು ಇದನ್ನು ತಿಳಿದುಕೊಳ್ಳಬೇಕು ಎಂದು ಕೇಂದ್ರದ ಹಣಕಾಸು ಇಲಾಖೆ ರಾಜ್ಯ ಸಚಿವ ಶಿವ್ ಪ್ರತಾಪ್ ಶುಕ್ಲಾ ತಿಳಿಸಿದರು. 

ಭಾರತ್ ನೀತಿ ಸರ್ಕಾರೇತರ ಸಂಸ್ಥೆ ಮತ್ತು ಜೈನ್ ವಿದ್ಯಾಸಂಸ್ಥೆ ಸಹಯೋಗದಲ್ಲಿ ಗುರು ವಾರ ಆಯೋಜಿಸಿದ್ದ ‘ಸ್ಟಾರ್ಟ್ ಅಪ್ ಕಾನ್ ಕ್ಲೇವ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಅವರು, ಕೇಂದ್ರ ಸರ್ಕಾರವು ಸ್ಟಾಟ್ ರ್ಅಪ್ ಯೋಜನೆಗಳಿಗಾಗಿ 10 ಸಾವಿರ ಕೋಟಿ ಮೀಸಲಿಟ್ಟಿದೆ. ನವೋದ್ಯಮಗಳನ್ನ ಆರಂಭಿಸಲು ಇಲ್ಲಿಯವರೆಗೂ ದೇಶಾದ್ಯಂತ 30 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ನವೋದ್ಯಮಗಳನ್ನು ಮುನ್ನೆಲೆಗೆ ತರಲು ಯುಪಿಎ ಎರಡನೇ ಅವಧಿ ಸರ್ಕಾರದಲ್ಲಿ ಹೆಚ್ಚಿನ ಒತ್ತು ನೀಡಿರಲಿಲ್ಲ. ಬಿಜೆಪಿ ಸರ್ಕಾರವು ಸಣ್ಣ ಪುಟ್ಟ ಉದ್ಯಮಗಳಿಗೆ ಸಹಕಾರ ನೀಡುತ್ತಿದೆ. ಜನಧನ್ ಮೂಲಕ ಮನೆ ಮನೆಗೆ ಬ್ಯಾಂಕ್ ಸೇವೆ ನೀಡಲಾಗಿದ್ದು, ಅಂದಾಜು 78 ಸಾವಿರ ಕೋಟಿ ಬ್ಯಾಂಕ್ ಖಾತೆಗಳಲ್ಲಿವೆ ಎಂದು ತಿಳಿಸಿದರು. 

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಅತಿ ವೇಗವಾಗಿ ಆರ್ಥಿಕವಾಗಿ ಸಬಲರಾಗಲು ನವೋದ್ಯಮಗಳು ಸಹಕಾರಿಯಾಗಿವೆ. ಆರ್ಥಿಕ ಇಲಾಖೆ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಪ್ರಸ್ತುತ ಜಾಗತೀಕರಣ ಪ್ರಪಂಚಕ್ಕೆ ನವೋದ್ಯಮವು ಹೆಚ್ಚು ಸೂಕ್ತವಾಗಿದೆ ಎಂದರು. 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಮಾತನಾಡಿ, ಉದ್ಯ ಮಶೀಲತೆಗೆ ತಂತ್ರಜ್ಞಾನವು ಬಹಳ ಮುಖ್ಯ ವಾಗಿದೆ. ಹೆಚ್ಚಿನ ನವೋದ್ಯಮಗಳು ತಂತ್ರಜ್ಞಾನ ಆಧಾರಿತವೇ ಆಗಿವೆ. ಕೇಂದ್ರ ಸರ್ಕಾರವು ಬದ್ಧತೆ, ದೂರದೃಷ್ಟಿಯನ್ನಿಟ್ಟುಕೊಂಡು ನವೋದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉದ್ಯೋಗ ಸೃಷ್ಟಿಸಲಿದೆ ಎಂದು ಆಶ್ಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾರತ್ ನೀತಿ ಸಲಹೆಗಾರ ಜೆ.ಆರ್. ಬಂಗೇರಾ, ಸಂಚಾಲಕ ಅನೂಪ್ ಎ.ಜೆ., ಎಫ್‌ಕೆಸಿಸಿಐ ಉಪಾಧ್ಯಕ್ಷ ಸಿ.ಆರ್. ಜನಾರ್ದನ ಉಪಸ್ಥಿತರಿದ್ದರು.

Follow Us:
Download App:
  • android
  • ios